ಪೆರ್ಲ ಸ.ಉ.ಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ

0

ಪೆರ್ಲ: ಸರಕಾರಿ ಉನ್ನತೀಕರಿಸಿದ ಪ್ರಾರ್ಥಮಿಕ ಶಾಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಂಸಿ ಅಧ್ಯಕ್ಷ ನಾರಾಯಣಗೌಡ ನೆರವೇರಿಸಿದರು.

ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ದಿನಕರ್ ಕುರುಪ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ವನಿತಾ ವಸಂತ್ ಶೆಟ್ಟಿಗಾರ್, ವಿನಯಚಂದ್ರ.ಟಿ, ಯಮುನಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದಂತಹ ಶುಭಶ್ರೀ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿಗಾರ್, ಶಾಲಾ ಮುಖ್ಯ ಶಿಕ್ಷಕಿ ಉಷಾ ವಿ ಹಾಗೂ ಅಂಗನವಾಡಿ ಕಾರ್ಯಕರ್ತೆಯಾದ ಕುಸುಮ ಇವರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರವನ್ನು ನೀಡಿದ ಶಾಲೆಯ ಹಳೆ ವಿದ್ಯಾರ್ಥಿಗಳಾದ ರಂಜಿತ್ ಶೆಟ್ಟಿಗಾರ್ ಬರಮೇಲು, ಬೈಸಿಲ್ ಶಿಬಾಜೆ ರೂಪೇಶ್ ಗುಂಡ್ಯ, ಇವರೆಲ್ಲರ ಪರವಾಗಿ ರೂಪೇಶ್ ಗುಂಡ್ಯ ಇವರಿಗೆ ಶಾಲೆಯ ಎಸ್.ಡಿ.ಎಂ.ಸಿ ಸರ್ವ ಸದಸ್ಯರ ಪೋಷಕ ವೃಂದದವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಕರಾದ ಮಂಜುನಾಥ ಎಂಎಸ್ ಇವರು ಸ್ವಾಗತಿಸಿ, ಸಹ ಶಿಕ್ಷಕಿಯಾದ ರಕ್ಷಿತಾ ಪಿ ಇವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here