ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.ಗ್ರಾ.ಪಂ ಕೊಯ್ಯೂರು ಇದರ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಮಲೆಬೆಟ್ಟು ಧ್ವಜಾರೋಹಣ ಮಾಡಿದರು.
ಬಳಿಕ ಮಾತಾಡಿ ನಾವು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ವಹಸಿ ಸಂವಿಧಾನ ಶಿಲ್ಪಿ ಅಂಬೇಡ್ಕರವರು ತನ್ನ ಛಲ ಮತ್ತು ಹಠದಿಂದ ಅಧ್ಯಯನ ಮಾಡಿ ಜ್ಞಾನ ಸಂಪಾದನೆ ಮಾಡಿರುವುದರಿಂದ ನಮ್ಮ ರಾಷ್ಟ್ರಕ್ಕೆ ಪರಿಪೂರ್ಣ ಸಂವಿಧಾನ ನೀಡುವಂತಾಯಿತು.ಆದುದರಿಂದ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಅಂಬೇಡ್ಕರವರ ಹಾದಿ ಹಿಡಿದರೆ ಸಂವಿಧಾನಕ್ಕೆ ನೀಡುವ ದೊಡ್ಡ ಗೌರವ ಎಂದರು.
ಮೋಹಾನಂದ ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ ನೀಡಿದರು.ಶಿಕ್ಷಕರಾದ ಬೇಬಿ, ದೀಪ್ತಿ ಹೆಗ್ಡೆ , ಗೀತಾ ಉಡುಪಿ, ಸುದಾಕರ ಶೆಟ್ಟಿ, ರಾಮಚಂದ್ರ ದೊಡಮನಿ, ಪ್ರವೀಣ್ ಕುಮಾರ್ ಹೆಚ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುಮಾರ್ ಮನೋಜ್ ಮತ್ತು ದನ್ವಿತ್ ನಿರೂಪಿಸಿದರು.ಸಂಜನಾ ಸ್ವಾಗತಿಸಿದರು.ನುಜೈರಾ ವಂದಿಸಿದರು.
p>