ಉಜಿರೆ ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

0

ಉಜಿರೆ: ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಜ.26ರಂದು ನಡೆಯಿತು.

ಜ.25ನೇ ಗುರುವಾರ ಸಂಜೆ ಘಂಟೆ 6ಕ್ಕೆ ಪ್ರಾರ್ಥನೆ, ದುರ್ಗಾ ಪೂಜೆ ಆರಂಭಗೊಂಡು ಸಂಜೆ ಘಂಟೆ 8-00ಕ್ಕೆ ಮಹಾಪೂಜೆ, ಆರಾಧನೆ, ಸಂಜೆ ಘಂಟೆ 8-30ಕ್ಕೆ ತೀರ್ಥ ಪ್ರಸಾದ ನಡೆಯಿತು.

ಜ.26ರಂದು ಪ್ರಾತಃಕಾಲ ಘಂಟೆ 5:30ರಿಂದ ಪುಣ್ಯಾಹ, ಕಲಶ ಪ್ರತಿಷ್ಠೆ, ಬೆಳಿಗ್ಗೆ ಪಂಟೆ 8-30ಕ್ಕೆ ಗಣಪತಿ ಹೋಮ (12 ಕಾಯಿ) ಪೂರ್ವಾಹ್ನ 9ಕ್ಕೆ ಅಭಿಷೇಕಾದಿಗಳು, ಪರ್ವಾರಾಧನೆಗಳು, 9-30ಕ್ಕೆ ದುರ್ಗಾಹೋಮ ಪೂರ್ವಾಹ್ನ 11.00ಕ್ಕೆ ದುರ್ಗಾಹೋಮ, ಪೂರ್ಣಾಹುತಿ ಆಶ್ಲೇಷಬಲಿ, ಮಧ್ಯಾಹ್ನ ಘಂಟೆ 12-00ಕ್ಕೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ವಟು, ಬ್ರಾಹ್ಮಣ ಆರಾಧನೆ ತೀರ್ಥ ಪ್ರಸಾದ, ಅಪರಾಹ್ನ ಘಂಟೆ 1-00ರಿಂದ ಅನ್ನ ಸಂತರ್ಪಣೆ ಜರಗಿತು.ಸಂಜೆ ಘಂಟೆ 6-00ರಿಂದ ಸಂಕಲ್ಪ, ರಂಗಪೂಜೆ ಆರಂಭ, ರಾತ್ರಿ ಗಂಟೆ 8-00ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

ಕ್ಷೇತ್ರದ ಮುಖ್ಯಸ್ಥರಾದ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಭಕ್ತಾಧಿಗಳು, ಲಕ್ಮಿ ಗ್ರೂಪ್ ಇಂಡಸ್ಟ್ರೀಯ ಸಿಬ್ಬಂದಿಗಳು, ಊರ ಗಣ್ಯರು ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here