ಉಜಿರೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಮ್ಮಿಕೊಂಡಿದ್ದ 31ನೇ ರಾಜ್ಯಮಟ್ಟದ ವಿಜ್ಞಾನ ಸಮಾವೇಶವು ಕಲಬುರ್ಗಿ ಜಿಲ್ಲೆ ಸೇಡಮ್ನ ಶ್ರೀ ಕೊತ್ತಲ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಜರುಗಿತು.
ಈ ಸಮಾವೇಶದಲ್ಲಿ ಉಜಿರೆ ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆಯ(ರಾಜ್ಯ ಪಠ್ಯಕ್ರಮ) 9ನೇ ತರಗತಿಯ ವಿದ್ಯಾರ್ಥಿಗಳಾದ ಅಧೀಷ್ ಬಿ.ಸಿ ಮತ್ತು ಆಲಾಪ್ ಇವರು ಗ್ರಾಮೀಣ ಹಿರಿಯ ವಿಭಾಗದಲ್ಲಿ ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಾದ ಸಚಿತ್ ಭಟ್ ಮತ್ತು ಸುಜನ್ ಗೌಡ ಇವರು ಕಿರಿಯ ವಿಭಾಗದಲ್ಲಿ ಶಿಕ್ಷಕಿಯರಾದ ಧನ್ಯವತಿ ಮತ್ತು ಶೋಭಾ ಎಸ್ ಇವರ ಮಾರ್ಗದರ್ಶನದಲ್ಲಿ ವಿಜ್ಞಾನ ಯೋಜನೆ ಮಂಡಿಸಿ, ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತ ಒಟ್ಟು 121 ತಂಡಗಳು ಭಾಗವಹಿಸಿದ್ದವು.
ಇವರಿಗೆ ಆಡಳಿತ ಮಂಡಳಿ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ಎನ್.ನಾಯಕ್ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.
p>