ಮಡಂತ್ಯಾರು: ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿಯ ಸಮಾರೋಪ ಸಮಾರಂಭ

0

ಮಡಂತ್ಯಾರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, ಬ್ಯಾಂಕ್ ಒಫ್ ಬರೋಡ ಮಚ್ಚಿನ ಶಾಖೆ ಹಾಗೂ ಕರ್ನಾಟಕ ರಾಜ್ಯ ಟೈಲರ್ ಒಕ್ಕೂಟ ಮಡoತ್ಯಾರು ವಲಯ ಇವರ ಸಹಕಾರದಲ್ಲಿ 10 ದಿನಗಳ ಬಟ್ಟೆ ಕಸೂತಿ ತಯಾರಿಕೆಯ (ಆರಿ ವರ್ಕ್ )ತರಬೇತಿಯ ಸಮಾರೋಪ ಸಮಾರಂಭ ಮಡoತ್ಯಾರು ಶಿಶು ವಿಹಾರದ ಮಹಿಳಾ ಮಂಡಲ ಸಭಾಂಗಣದಲ್ಲಿ ಜ 20 ರಂದು ನಡೆಯಿತು.

ಬ್ಯಾಂಕ್ ಒಫ್ ಬರೋಡ ಮಂಗಳೂರು ವಲಯ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಸುಗುಣಾವತಿ ತರಬೇತಿ ಪಡೆದ ಮಹಿಳೆಯರು ಕಲಿತ ಕೌಶಲ್ಯದ ಮೆಚ್ಚುಗೆ ವ್ಯಕ್ತ ಪಡಿಸಿದರು.

ತರಬೇತಿ ಪಡೆದ ನಂತರ ಬ್ಯಾಂಕ್ ಹಾಗೂ ಸರ್ಕಾರದ ಸಾಲ ಯೋಜನೆ ಪಡೆದು ಸ್ವ ಉದ್ಯೋಗ ಮಾಡುವಲ್ಲಿ ಕಾರ್ಯ ಪ್ರವೃತ್ತರಾಗಲು ಸಲಹೆ ನೀಡಿದರು.ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕಾರದ ಜೀವನ್ ಕೊಲ್ಯ ಇವರು ಮಹಿಳೆಯರು ಸ್ವ ಉದ್ಯೋಗ ತರಬೇತಿಯ ಪ್ರಯೋಜನ ಪಡೆದು ಸ್ವಾವಲಂಬನೆಯಿಂದ ಎಲ್ಲರಿಗೂ ಮಾದರಿಯಾಗಿ ಜೀವನ ಸಾಗಿಸುವ ಪ್ರಯತ್ನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಮಡಂತ್ಯಾರು ಪಂಚಾಯತ್ ಅಧ್ಯಕ್ಷೆ ರೂಪ ನವೀನ್, ರಾಜ್ಯ ಟೈಲರ್ ಒಕ್ಕೂಟದ ಕ್ಷೇತ್ರ ಅಧ್ಯಕ್ಷೆ ವೇದಾವತಿ, ಮಡಂತ್ಯಾರು ವಲಯ ಅಧ್ಯಕ್ಷೆ ವಸಂತಿ ಲಕ್ಷ್ಮಣ್, ಮಹಿಳಾ ಮಂಡಲ ಅಧ್ಯಕ್ಷೆ ಲೂಸಿ ಕಾರ್ಲೊ, ತರಬೇತುದಾರರಾದ ಸುಮನ ಉಪಸ್ಥಿತರಿದ್ದರು.

ಸುಮಲತಾ ಕಾರ್ಯಕ್ರಮ ನಿರೂಪಣೆ ಮಾಡಿದರು.ಮಡಂತ್ಯಾರು ಗ್ರಾಮ ವ್ಯಾಪ್ತಿಯ ಸುತ್ತ ಮುತ್ತ ಊರಿನ ಸುಮಾರು 28 ಮಹಿಳೆಯರು ಈ 10 ದಿನದ ತರಬೇತಿಯನ್ನು ಯಶಸ್ವಿಯಾಗಿ ಪಡೆದು ಪ್ರಮಾಣ ಪತ್ರ ಪಡೆದರು.

LEAVE A REPLY

Please enter your comment!
Please enter your name here