ಬೆಳ್ತಂಗಡಿ: ವಿವಿಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ

0

ಬೆಳ್ತಂಗಡಿ: ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳೂರಿನ ಪಾವೂರು ನಿವಾಸಿಯಾದ ಚಂದ್ರಹಾಸ ಅಮೀನ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 4,75,000/- ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಹಾಗೂ ಅದೇ ನ್ಯಾಯಾಲಯದಲ್ಲಿ ಮುಂಡಾಜೆ ನಿವಾಸಿ ಗುಣಪಾಲ ಎಂ ಎಸ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 81,721/- ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಅದೇ ರೀತಿ ಕಾಜೂರು ನಿವಾಸಿಯಾದ ಸಮೀರ್ ಎಂಬರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 1,00,000/- ಮೊತ್ತದ ಚೆಕ್ ಬೌನ್ಸ್ ಪ್ರಕರಣ ಹಾಗೂ ಮೂಡಬಿದ್ರೆ ನಿವಾಸಿಯಾದ ಸುನಿಲ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 45,000/- ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳನ್ನು ನಿರ್ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿರುತ್ತದೆ.

ಅದೇ ರೀತಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮುಂಡಾಜೆ ನಿವಾಸಿಯಾದ ಪ್ರಸಾದ್ ಶೆಟ್ಟಿ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 1,00,000/- ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಮಾನಿಸಿ ನ್ಯಾಯಾಲಯವು ತೀರ್ಪು ನೀಡಿರುತ್ತದೆ.ಹಾಗೂ ಮಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಮುಂಡಾಜೆಯ ನಿವಾಸಿಯಾದ ರವಿ ಎನ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 5,65,000/- ಗಳ ಚೆಕ್ಕು ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಮಾನಿಸಿ ನ್ಯಾಯಾಲಯವು ತೀರ್ಪು ನೀಡಿರುತ್ತದೆ.

ಸದ್ರಿ ಈ ಮೇಲಿನ ಎಲ್ಲಾ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಲೆಕ್ಸ್ ವಿಷನ್ ಲಾ ಚೇಂಬರ್ಸ್ ( ಬೆಳ್ತಂಗಡಿ ಹಾಗೂ ಬೆಂಗಳೂರು) ನ ನ್ಯಾಯವಾದಿಗಳಾದ ನವಾಜ್ ಶರೀಫ್ ಎ, ಮಮ್ತಾಜ್ ಬೇಗಂ, ಇರ್ಷಾದ್, ಮತ್ತು ಸಪ್ನಾಝ್ ಇವರನ್ನು ಒಳಗೊಂಡ ವಕೀಲರು ತಂಡ ವಾದಿಸಿದ್ದರು.

LEAVE A REPLY

Please enter your comment!
Please enter your name here