ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಕನ್ನಡ ವ್ಯಾಕರಣ ಮಾಲಿಕೆ ಕಾರ್ಯಾಗಾರ

0

ಪಟ್ರಮೆ: ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಕನ್ನಡ ವ್ಯಾಕರಣ ಮಾಲಿಕೆ ಕಾರ್ಯಗಾರವು ಜನವರಿ 19ರಂದು ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು.

ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಮಾತನಾಡಿ, ಕೇವಲ ತರಗತಿಯೊಳಗೆ ಪಾಠಗಳನ್ನು ಸೀಮಿತವಾಗಿರಿಸದೆ, ಒಂದೇ ಸೂರಿನಡಿಯಲ್ಲಿ ಹಲವು ತರಗತಿಗಳ ವಿದ್ಯಾರ್ಥಿಗಳನ್ನು ಸಂಯೋಜಿಸಿ ಕಾರ್ಯಗಾರದ ಮೂಲಕ ಕಲಿಕಾ ವಿಷಯವನ್ನು ಬೋಧಿಸಿದರೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಅದನ್ನು ಸ್ವೀಕರಿಸುತ್ತಾರೆ. ಶಾಲೆಯಲ್ಲಿ ಇಂತಹ ಕಾರ್ಯಗಾರಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಡೆಯಲಿದ್ದು ವಿದ್ಯಾರ್ಥಿ ಪೂರಕ ವಾತಾವರಣವನ್ನು ಕಲ್ಪಿಸಿ ಕೊಡುವಲ್ಲಿ ಶಾಲೆಯಲ್ಲಿರುವ ಶಿಕ್ಷಕರು ಕಾರ್ಯಯೋನ್ಮುಖರಾಗಿದ್ದಾರೆ ಎಂದರು.

ಶಾಲೆಯ ಕನ್ನಡ ವಿಭಾಗದ ಶಿಕ್ಷಕಿಯರಾದ ಸುಪ್ರೀತಾ ಎ ಹಾಗೂ ಸ್ವಾತಿ ಕೆ.ವಿ ಕಾರ್ಯಗಾರದ ಅವಧಿಯಲ್ಲಿ ಕನ್ನಡ ವ್ಯಾಕರಣದಲ್ಲಿ ತಿಳಿಸಲಾಗಿರುವ ಕನ್ನಡ ಸಂಧಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸುಮಾರು 2 ಗಂಟೆಗಳ ಕಾಲ ನಡೆದ ಕಾರ್ಯಾಗಾರದಲ್ಲಿ 5ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದರು.

ಶಾಲೆಯ ಇತರ ವಿಭಾಗದ ಶಿಕ್ಷಕಯರು ಕೂಡ ಕಾರ್ಯಗಾರದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here