ಬೆಳ್ತಂಗಡಿ: ಯಾಮೊಟೋ ಶೊಟೋಕಾನ್ ಕರಾಟೆ ಎಸೋಸಿಯೇಶನ್ ಟ್ರಸ್ಟ್ ಮಂಗಳೂರು ಹಾಗೂ ರೋಟರಿ ಕ್ಲಬ್ ಗಳ ಸಹಯೋಗದೊಂದಿಗೆ ಜನವರಿ 14ರಂದು ಸ್ಪರ್ಶ ಕಲಾ ಮಂದಿರ ಬಿ.ಸಿ ರೋಡ್ ನಲ್ಲಿ ಆಯೋಜಿಸಿದ ಎರಡನೇ ರಾಜ್ಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ಮಾನ್ವಿ (7ನೇ) ಕಟಾ ಪ್ರಥಮ, ಭುವಿ (7ನೇ)ಕುಮಿತೆ ಪ್ರಥಮ, ಆನ್ ಮರಿಯ (7ನೇ) ಕಟಾ ತೃತೀಯ, ಶಮಂತ್ (7ನೇ) ಕಟಾ ಪ್ರಥಮ ಮತ್ತು ಕುಮಿತೆ ಪ್ರಥಮ, ಮಹಮ್ಮದ್ ಅರ್ಮಾನ್ (6ನೇ)ಕಟಾ ತೃತೀಯ, ಸೋನಲ್ ಡಿಸೋಜ (6ನೇ) ಕಟಾ ದ್ವಿತೀಯ ಮತ್ತು ಕುಮಿತೆ ತೃತೀಯ, ಅಂಜು ಮರಿಯಾ (6ನೇ)ಕಟಾ ತೃತೀಯ ಮತ್ತು ಕುಮಿತೆ ದ್ವಿತೀಯ, ಅಯಾನ್ (6ನೇ) ಕಟಾ ಪ್ರಥಮ, ಕುಮಿತೆ ದ್ವಿತೀಯ, ಮನ್ವಿಕ್ (5ನೇ) ಕಟಾ ದ್ವಿತೀಯ, ಪ್ರಜ್ವಲ್ ಗೌಡ ಕಟಾ ತೃತೀಯ (5ನೇ), ಪ್ರಗತಿ (5ನೇ) ಕಟಾ ತೃತೀಯ, ಆರೋನ್ ಫೆರ್ನಾಂಡಿಸ್ (5ನೇ) ಕಟಾ ತೃತೀಯ, ತನಿಶ್ (5ನೇ) ಕಟಾ ದ್ವಿತೀಯ, ಮಹಮ್ಮದ್ ತನ್ಝೀಲ್(4ನೇ) ಕುಮಿತೆ ಪ್ರಥಮ ಮತ್ತು ಕಟಾ ದ್ವಿತೀಯ, ಆಲ್ವಿನ್ ರೊಡ್ರಿಗಸ್ (4ನೇ) ಕಟಾ ತೃತೀಯ, ವಿಹಾನ್ (4ನೇ) ಕಟಾ ಪ್ರಥಮ, ಕುಮಿತೆ ದ್ವಿತೀಯ, ಭವಿಶ್ ಶೆಟ್ಟಿ(4ನೇ) ಕಟಾ ಪ್ರಥಮ ಮತ್ತು ಕುಮಿತೆ ಪ್ರಥಮ, ಏಂಜಲಿನ್ ಡೇಸಾ (1ನೇ) ಕುಮಿತೆ ದ್ವಿತೀಯ ಮತ್ತು ಯು ಕೆ ಜಿ ವಿದ್ಯಾರ್ಥಿಗಳಾದ ಫೌಸ್ಟಿನ ಮರಿಯ ಕಟಾ ದ್ವಿತೀಯ, ಕುಮಿತೆ ಪ್ರಥಮ ಮತ್ತು ಗೇಲ್ ಮಿರಾಂದ ಕಟಾ ಪ್ರಥಮ ಮತ್ತು ಕುಮಿತೆ ತೃತೀಯ ಸ್ಥಾನ ಪಡೆದಿದ್ದಾರೆ.
ತಮ್ಮ ವಯೋಮಾನದ ಕಟಾ ಮತ್ತು ಕುಮಿತೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸಮಗ್ರ ಪ್ರಶಸ್ತಿ ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕರಾಟೆ ಶಿಕ್ಷಕ ಅಶೋಕ ಆಚಾರ್ಯ ತರಬೇತಿ ನೀಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.