ವೇಣೂರು: ಜ.11ರಿಂದ ಜ.17ರವರೆಗೆ ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರೀಯ ರಸ್ತೆ ಸುರಕ್ಷತಾ 2024ರ ಅಂಗವಾಗಿ ಎಸ್.ಡಿ.ಎಂ. ಐಟಿಐ ವೇಣೂರು ಇಲ್ಲಿನ ಮಂಜುಶ್ರೀ ರೋವರ್ಸ್ ವಿಭಾಗ, ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಬಂಟ್ವಾಳ, ಅರಕ್ಷಕ ಠಾಣೆ ವೇಣೂರು, ಲಯನ್ಸ್ ಕ್ಲಬ್ ವೇಣೂರು ಇವುಗಳ ಸಹಭಾಗಿತ್ವದಲ್ಲಿ ಜ.16ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.50 ರೋವರ್ಸ್ ಹಾಗೂ 240 ವಿದ್ಯಾರ್ಥಿಗಳು ಭಾಗವಹಿಸಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್ ರವರು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರು.
ವೇಣೂರು ಅರಕ್ಷಕ ಠಾಣಾಧಿಕಾರಿ ರಾಜೇಶ್, ನಿರಂಜನ್ ಕೆ.ಎಸ್. ಅಧ್ಯಕ್ಷರು ಲಯನ್ಸ್ ಕ್ಲಬ್ ವೇಣೂರು, ತರಬೇತಿ ಅಧಿಕಾರಿ ಪೀಟರ್ ಸಿಕ್ವೇರಾ ಉಪಸ್ಥಿತರಿದ್ದರು. ರೋವರ್ಸ್ ಲೀಡರ್ ಜಾಕೋಬ್ ಟೆ.ವಿ. ಸ್ವಾಗತಿಸಿ ರೋವರ್ಸ್ ಅನುರಾಗ್ ಕಾರ್ಯಕ್ರಮ ನಿರೂಪಿಸಿ ಶಶಿಧರ್ ಧನ್ಯವಾದಗೈದರು.