ಬೆಳ್ತಂಗಡಿ: ನೂತನ ನೃತ್ಯ ತರಬೇತಿ ಕೇಂದ್ರದ ಉದ್ಘಾಟನೆ

0

ಬೆಳ್ತಂಗಡಿ: ಡ್ರೀಮ್ ಝೋನ್ ಡಾನ್ಸ್ ಕ್ರೀವ್ ಇದರ ನೂತನ ನೃತ್ಯ ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಮಹಿಳಾ ವೃಂದ ಐಬಿ ರಸ್ತೆ ಬೆಳ್ತಂಗಡಿಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನಾಗಕುಮಾರ್ ಜೈನ್ ಪದ್ಮಾಂಬ ಕೆಟರರ್ಸ್ ಅಳದಂಗಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಶಾ ಸತೀಶ್ ಮಹಿಳಾ ವೃಂದ ಬೆಳ್ತಂಗಡಿ, ವಾಣಿ ಬೆಳಾಲು ಮತ್ತು ಉಮಾ ಮಹಿಳಾ ವೃಂದ ಬೆಳ್ತಂಗಡಿ ಹಾಜರಿದ್ದರು.

ಡ್ರೀಮ್ ಝೋನ್ ಡಾನ್ಸ್ ಕ್ರೀವ್ ನೃತ್ಯ ಸಂಯೋಜಕರಾದಂತಹ ಮೋಹಿತ್ ಕುಲಾಲ್ ಮತ್ತು ಚೈತ್ರಾ ಹಾಗೂ ತಂಡದ ಎಲ್ಲಾ ಪೋಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಲೀಲೇಶ್ ಮತ್ತು ಮುಕ್ತಿಶ್ರೀ ಪಡಂಗಡಿ ಇವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟು ಕಾರ್ಯಕ್ರಮವನ್ನು ಚಂದಗಾಣಿಸಿದರು.

LEAVE A REPLY

Please enter your comment!
Please enter your name here