ಸೌಜನ್ಯಳಿಗೆ ನ್ಯಾಯ ಹೋರಾಟದ ನೆಪದಲ್ಲಿ ಇತರರ ತೇಜೋವಧೆ ಸರಿಯಲ್ಲ: ಭಾಸ್ಕರ ಧರ್ಮಸ್ಥಳ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಸೌಜನ್ಯಾಳಿಗೆ ನ್ಯಾಯ ಸಿಗಬೇಕಾದ್ದೇ, ಆದರೆ ಹೋರಾಟದ ನೆಪದಲ್ಲಿ ಪ್ರಕರಣಕ್ಕೆ ಸಂಬಂಧಪಡದೇ ಇರುವವರನ್ನು ತೇಜೋವಧೆ ಮಾಡುವುದು, ಅವಮಾನಿಸುವುದು ಸರಿಯಲ್ಲ ಎಂದು ವಿ.ಹಿಂ.ಪರಿಷತ್ತಿನ ವಿಭಾಗೀಯ ಸಾಮರಸ್ಯ ಸಂಯೋಜಕ ಭಾಸ್ಕರ ಧರ್ಮಸ್ಥಳ ಹೇಳಿದರು.

ಅವರು ಜ.16ರಂದು ಸುವರ್ಣ ಆರ್ಕೇಡ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸೌಜನ್ಯಾಳ ಪ್ರಕರಣದ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡು ಹೋರಾಟಗಾರರೆಂದು ಕರೆಸಿಕೊಳ್ಳುವವರು ಹೋರಾಟವನ್ನು ಹಣ ಮಾಡುವ ದಂಧೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.ಗಿರೀಶ್ ಮಟ್ಟಣ್ಣನವರು ಧರ್ಮಸ್ಥಳದಲ್ಲಿರುವವರು ರೇಪಿಸ್ಟ್ ಗಳು ಎಂದು ಆರೋಪಿಸಿದ್ದಾರೆ.ಇದನ್ನು ಸಿದ್ಧಮಾಡಿ ತೋರಿಸಲಿ ಎಂದು ಸವಾಲೆಸದ ಭಾಸ್ಕರ್ ಅವರು, ನನ್ನ ಮೇಲೇ ಆರೋಪಿಸುವವರು ಪ್ರಮಾಣಕ್ಕೆ ಬರಲಿ.ಅವರು ತಿಳಿಸಿದ ಯಾವುದೇ ದೈವ, ದೇವಸ್ಥಾನಕ್ಕೆ ಬರಲು ಸಿದ್ಧ.ಸೌಜನ್ಯಾ ನ್ಯಾಯದ ಹೋರಾಟಕ್ಕೆ ನಮ್ಮ ಬೆಂಬಲ ಇದೆ.ಆದರೆ ಹೋರಾಟದ ನೆಪದಲ್ಲಿ ದಾರಿತಪ್ಪಿಸುವ ಕೆಲಸ ಮಾಡುವುದು ಸಲ್ಲ.ನಾನೂ ಹೋರಾಟ ಮಾಡಿಯೇ ಬಂದವನೇ.ವಿಡಿಯೋಗಳನ್ನು ತಿರುಚಿ ಅವಮಾನಿಸುವ ಕೆಲಸ ಮಾಡಬೇಡಿ ಎಂದರು.

ವಿಶ್ವ ಹಿಂದೂ ಪರಿಷತ್ ನ ಕಳೆಂಜದ ಸಂಚಾಲಕ ರಾಜೇಶ್ ಕೆ.ಅವರು ಮಾತನಾಡಿ ಕಳೆಂಜದಲ್ಲಿ ಇತ್ತೀಚೆಗೆ ನಡೆದ ಸೌಜನ್ಯ ಹೋರಾಟದ ಸಭೆಗೆ ನಾನು ಯಾವುದೇ ವಿರೋಧ ಮಾಡದಿದ್ದರೂ ವಿನಾ ಕಾರಣ ನನ್ನ ತೇಜೋವಧೆ ಮಾಡಿದ್ದಾರೆ.ಅಲ್ಲದೆ ಧರ್ಮದ ಮೇಲೆ, ಸ್ವಾಮೀಜಿಗಳ ಮೇಲೆ, ಪ್ರಧಾನಿ, ಶಾಸಕರಾದಿಯಾಗಿ ಎಲ್ಲರ ಬಗ್ಗೆಯೂ ತುಚ್ಛವಾಗಿ ಮಾತನಾಡಿದ್ದಾರೆ.ಸೌಜನ್ಯಾಳಿಗೆ ನ್ಯಾಯ ಸಿಗಬೇಕಾದದ್ದು ಸರಿಯಾದದ್ದೇ, ಆದರೆ ಕಳೆಂಜದಲ್ಲಿ ಸಭೆ ಮಾಡಿದರೆ ಸಿಗುವುದೇ ಎಂದು ಪ್ರಶ್ನಿಸಿದ ಅವರು ಪೋಲಿಸ್ ಠಾಣೆಯ ಎದುರು ಪ್ರತಿಭಟಿಸುವ ಧೈರ್ಯ ಇವರಿಗೆ ಇಲ್ಲದಿರುವುದು ವಿಪರ್ಯಾಸ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಗೋಸೇವಾ ಗತಿವಿಧಿಯ ಪ್ರಮುಖ್ ದಾಮೋದರ ಪುದವೆಟ್ಟು ಅವರು ಸೌಜನ್ಯಾಳ ವಿಚಾರದಲ್ಲಿ ಸರಿಯಾದ ನ್ಯಾಯಪರ ಹೋರಾಟಕ್ಕೆ ನಾನು ಸದಾ ಸಿದ್ಧ ಎಂದರು.

ಬೆಳ್ತಂಗಡಿ ಪ್ರಕೋಷ್ಠದ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಸಂದೀಪ ರೈ ಅವರು, ಸುಳ್ಳು ಮಾಹಿತಿಗಳನ್ನು ಹರಡುವ ಮೂಲಕ ಜನರನ್ನು ಘಾಸಿಗೊಳಿಸುತ್ತಿದ್ದಾರೆ.ರಾಮಮಂದಿರ, ಮಂತ್ರಾಕ್ಷತೆ, ಮೋದಿಯನ್ನೂ ಬಿಡದೆ ತೆಗಳುತ್ತಿದ್ದಾರೆ.ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಜಿಲ್ಲಾ ಆಖಾಡ ಪ್ರಮುಖ್ ಗಣೇಶ್ ಕಳಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here