ಬಡಕೋಡಿ ಲಿಂಗಪ್ಪ ನಾಯ್ಕ ನಿಧನ

0

ಬಡಕೋಡಿ: ಬಡಕೋಡಿ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕು ಮರಾಠಿ ಸಂಘದ ಗೌರವ ಅಧ್ಯಕ್ಷರು ಮತ್ತು ಫ್ರೆಂಡ್ಸ್ ಕ್ಲಬ್ (ರಿ ) ಹೊಸಂಗಡಿ ಇದರ ಸದಸ್ಯ ಆಗಿದ್ದ ಲಿಂಗಪ್ಪ ನಾಯ್ಕ್(54ವರ್ಷ) ಬಡಕೋಡಿ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜ.16 ರಂದು ನಿಧನರಾದರು.

ಅತ್ಯುತ್ತಮ ಸಂಘಟಕರಾದ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ಇವರು ಚಿತ್ರ ಕಲಾವಿದರು ಆಗಿದ್ದರು.ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನ ಇದರ ಜೀರ್ಣೋದ್ಧಾರ ಕಾರ್ಯದಲ್ಲಿ ಇವರ ಕೊಡುಗೆ ಅಪಾರವಾದುದು.ಸೆಂಟ್ರಲ್ ಮೆರೆಯಿನೆನ್ ಫಿಶೆರಿನ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಮಂಗಳೂರು(CMFRIM)ಇದರ ಕೃಷಿ ವಿಭಾಗದ ತಾಂತ್ರಿಕ ಅಧಿಕಾರಿಯಾಗಿದ್ದ ಇವರು ತಾಯಿ ಗುಲಾಬಿ, ಪತ್ನಿ ಹರಿಣಾಕ್ಷಿ ಮತ್ತು ಇಬ್ಬರು ಪುತ್ರಿಯರಾದ ಪ್ರತೀಕ್ಷಾ, ಅಪೇಕ್ಷಾ ಹಾಗೂ ಸಹೋದರಿಯರು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here