ಕಳೆಂಜ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ, ಪರಪ್ಪು- 51ನೇ ವರ್ಷದ ಭಜನಾ ವಾರ್ಷಿಕೋತ್ಸವ

0

ಬೆಳ್ತಂಗಡಿ: ಕಳೆಂಜ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ, ಪರಪ್ಪು ಇಲ್ಲಿ 51ನೇ ವರ್ಷದ ಭಜನಾ ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜ.14 ಮತ್ತು 15 ರಂದು ನಡೆಯಿತು.

ಜ.14ರಂದು ಬೆಳಿಗ್ಗೆ ಗಣಪತಿ ಹೋಮ ನಡೆಯಿತು.ಆ ದಿನ ಸಂಜೆ ಆರು ಗಂಟೆಗೆ ರವಿರಾಜ್ ಜೈನ್ ಅವರಿಂದ ದೀಪ ಪ್ರಜ್ವಲನಗೊಂಡು ಭಜನಾ ಕಾರ್ಯಕ್ರಮ ಆರಂಭಗೊಂಡಿತು.ಮರುದಿನ ಬೆಳಗ್ಗಿನವರೆಗೆ ಭಜನೆ ನಡೆಯಿತು.ಗ್ರಾಮಸ್ಥರು ಹಾಗೂ ಸುತ್ತು ಮುತ್ತಲಿನ ಹತ್ತು ತಂಡಗಳು ಈ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನಾ ಸೇವೆ ನೀಡಿದರು.

ರಾತ್ರಿ ಪ್ರದೋಷ ಪೂಜೆಯ ನಂತರ ಅನ್ನ ಸಂತರ್ಪಣೆ ನಡೆಯಿತು.ಮರುದಿನ ಬೆಳಿಗ್ಗೆ ಆರು ಗಂಟೆಗೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದು ಭಜನಾ ಕಾರ್ಯಕ್ರಮ ಮುಕ್ತಾಯಗೊಂಡಿತು. ಉದ್ಯಮಿಗಳಾದ ಎ.ಸಿ ಕುರಿಯನ್ ಇವರು ಅನ್ನಸಂತರ್ಪಣೆಗೆ ಪೂರ್ಣ ಸಹಕಾರ ನೀಡಿದರು.ಅರ್ಚಕ ವರದ ಶಂಕರ ದಾಮ್ಲೆ ಅವರು ಪೂಜೆ ಹಾಗೂ ವೈದಿಕ ಕಾರ್ಯಗಳನ್ನು ನೆರವೇರಿಸಿದರು.

ಊರ, ಪರ ಊರಿನ ಭಕ್ತಾಭಿಮಾನಿಗಳು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾದರು.

LEAVE A REPLY

Please enter your comment!
Please enter your name here