ಮುಗೇರಡ್ಕ ಶ್ರೀ ದುರ್ಗಾನುಗ್ರಾಹ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ

0

ಮೊಗ್ರು: ಮುಗೇರಡ್ಕ ಮೂವರು ದೈವಗಳ ದೇವಸ್ಥಾನ ಹಾಗೂ ಶ್ರೀ ದುರ್ಗಾನುಗ್ರಾಹ ಭಜನಾ ಮಂದಿರದ ಮುಗೇರಡ್ಕದಲ್ಲಿ ಅರ್ಧ ಏಕಾಹ ಭಜನೆ ಜ.13 ರಂದು ಭಜನಾ ಮಂದಿರದಲ್ಲಿ ನಡೆಯಿತು.

ಬೆಳ್ಳಿಗೆ ಗಣಹೋಮ ನಡೆದು ಬಳಿಕ 6.58 ರಿಂದ ಸಂಜೆ 6.24ರ ತನಕ ಏಕಾಹ ಭಜನೆ ನಡೆಯಲಿದೆ.

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಭಜನಾ ಮಂಡಳಿ, ಬಜತ್ತೂರು ಮುದ್ಯ ಪಂಚಲಿಂಗೇಶ್ವರ ಭಜನಾ ಮಂಡಳಿಯ ಮಹಿಳಾ ತಂಡ, ನಡ್ವ ವಿಷ್ಣುಮೂರ್ತಿ ಭಜನಾ ಮಂಡಳಿ, ಮುರ ಬುಳೇರಿ ರಾಮ ಭಜನಾ ಮಂದಿರ, ಊಂತನಾಜೆ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ, ಬೆದ್ರೋಡಿ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಬಂದಾರು ರಾಮನಗರ ಶ್ರೀ ರಾಮ ಭಜನಾ ಮಂಡಳಿ, ಗೋಳಿತೋಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಪಂಜಾಳ ಪಾಂಚಜನ್ಯ ಗೆಳೆಯರ ಬಳಗ, ಕೆಲೆಂಜಿಮಾರು ನಾಗಳ್ಳಿ ಗೆಳೆಯರ ಬಳಗ, ಕುಂಟಾಲಪಲ್ಕೆ ಶ್ರೀ ಸರಸ್ವತಿ ಭಜನೆ ಮಂಡಳಿ ಹಾಗೂ ಮುಗೇರಡ್ಕ ಶ್ರೀ ದುರ್ಗಾನುಗ್ರಾಹ ಭಜನಾ ಮಂದಿರ ಅರ್ಧ ಏಕಾಹ ಭಜನೆಯಲ್ಲಿ ಪಾಲ್ಗೊಂಡಿತ್ತು.

ಭಜನಾ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ಶ್ರೀ ಕ್ಷೇತ್ರ ಮುಗೇರಡ್ಕದ ಆಡಳಿತ ಮೊಕ್ತೇಸರ ರಾಮಣ್ಣ ಗೌಡ ದೇವಸ್ಯ ಗುತ್ತು, ಭಜನಾ ಮಂದಿರದ ಆಡಳಿತ ಸಮಿತಿಯ ಕಾರ್ಯದರ್ಶಿ ಪುರಂದರ ಗೌಡ ನಾಮಾರು ಹಾಗೂ ಶ್ರೀ ಕ್ಷೇತ್ರ ಮುಗೇರಡ್ಕದ ಆಡಳಿತ ಮೊಕ್ತೇಸರ ಮನೋಹರ ಗೌಡ ಅಂತರ, ಪದಾಧಿಕಾರಿಗಳ, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಸಾಯಂಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here