

ಉಜಿರೆ: ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಲ್ಲಿ ಜ.22ರಂದು ಶ್ರೀ ರಾಮಚಂದ್ರ ದೇವರ ಪ್ರಾಣಪ್ರತಿಷ್ಠೆಯ ಶುಭ ಸಂಭ್ರಮಾಚರಣೆಯ ಪ್ರಯುಕ್ತ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಭಾರತಿ ಕನ್ಯಾಡಿ, ಬೆಳ್ತಂಗಡಿ ಅವರ ಸಂಯೋಜನೆ ಮತ್ತು ಪರಿಕಲ್ಪನೆಯಲ್ಲಿ “ಅಯೋಧ್ಯಾ ಶ್ರೀ ರಾಮ ಚರಿತಂ” ಯಕ್ಷಗಾನ ಪ್ರದರ್ಶನ ಜ.21ರಂದು ಭಾನುವಾರ ಸಂಜೆ 6.30ರಿಂದ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ.
ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜ.19ರಂದು ಶುಕ್ರವಾರ ಸಂಜೆ 7ರಿಂದ ವಿದುಷಿ ಪ್ರಿಯ ಸತೀಶ್ ಅವರ ಶಿಷ್ಯವೃಂದದವರಿಂದ “ನೃತ್ಯಾರ್ಪಣಂ “, ಜ.20ರಂದು ಶನಿವಾರ ಸಂಜೆ 6ರಿಂದ ಮಹಾರಾಷ್ಟ್ರ ಕಲ್ಯಾಣ್ ಪಂಡಿತ್ ಸತೀಶ್ ಕೆದ್ಲಾಯ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ರಾತ್ರಿ 8ರಿಂದ ಉಜಿರೆಯ ದೇವಿಕಿರಣ್ ಕಲಾನಿಕೇತನ ಇದರ ವಿದುಷಿ ಸ್ವಾತಿ ಜಯರಾಮ್ ಮತ್ತು ವಿಸ್ದುಷಿ ಪ್ರಥ್ವಿ ಸತೀಶ್ ಅವರ ಶಿಷ್ಯ ವೃಂದದವರಿಂದ “ನೃತ್ಯ ಸಂಭ್ರಮ “ನಡೆಯಲಿದೆ.
ಭಕ್ತ ಕಲಾಭಿಮಾನಿಗಳು ಪ್ರೋತ್ಸಾಹಿಸುವಂತೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.