

ಉಜಿರೆ: ಜ.22ರಂದು ಸೋಮವಾರ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಸಂಭ್ರಮದ ಪ್ರಯುಕ್ತ ಜ.14 ಭಾನುವಾರ ಬೆಳಗ್ಗೆ 9:30ಕ್ಕೆಉಜಿರೆಯ ಶ್ರೀ ಶಾರದಾ ಮಂಟಪ ದಲ್ಲಿ “ಸಂಪೂರ್ಣ ರಾಮಾಯಣ”ಕ್ಕೆ ಸಂಬಂಧಪಟ್ಟ ರಸಪ್ರಶ್ನೆ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದೆ.ಇದರಲ್ಲಿ ಭಾಗವಹಿಸಲು ಇಚ್ಛಿಸುವವರು:
1.15 ವರ್ಷದ ಒಳಗಿನ ಮಕ್ಕಳಿಗೆ ಹಾಗೂ 15 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗದಲ್ಲಿ ರಸಪ್ರಶ್ನೆ ನಡೆಸಲಾಗುವುದು.
2.ಒಂದು ತಂಡದಲ್ಲಿ ಕನಿಷ್ಠ ಎರಡು ಅಥವಾ ಗರಿಷ್ಠ ಮೂರು ಸಂಖ್ಯೆ ಇರಬೇಕು.
3.ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
4.ತೀರ್ಪುಗಾರರ ತೀರ್ಮಾನವೇ ಅಂತಿಮ ಚರ್ಚೆಗೆ ಅವಕಾಶವಿಲ್ಲ.
5.ವಿಜೇತ ತಂಡದವರಿಗೆ ಜ.22ರ ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ದಿವಸ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಸಮಯ 11:30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು.
6.ಬಹುಮಾನ ಪ್ರಥಮ, ದ್ವಿತೀಯ, ತೃತೀಯ ಇರುತ್ತದೆ.
ಎಂದು ಕಾರ್ಯಕ್ರಮದ ಪ್ರಾಯೋಜಕರಾದ ಮಾಧವ ಹೊಳ್ಳ, ಹೋಟೆಲ್ ಕಾಮಧೇನು ಉಜಿರೆ ತಿಳಿಸಿದ್ದಾರೆ.
ಭಾಗವಹಿಸಲಿರುವ ತಂಡದವರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಈ ಕೆಳಗಿನ ನಂಬರ್ ಗೆ ವಾಟ್ಸ್ಅಪ್ ಮಾಡಬಹುದು.ಶ್ರೀಕಾಂತ್ ಕಾಮತ್ : 9008420657, ವಿಜಯ ಅರಳಿ : 9449269643