ಉಜಿರೆ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಮಳಿಗೆಯಲ್ಲಿ ಪ್ರೆಸ್ಟೀಜ್ ಕಂಪನಿಯ ಮಿಕ್ಸರ್ ಗ್ರೈಂಡರ್, ಎಂಡ್ಯೂರ ಪ್ರೊ ಮಿಕ್ಸರ್ ಗ್ರೈಂಡರ್ ಬಿಡುಗಡೆ

0

ಬೆಳ್ತಂಗಡಿ: ಉಜಿರೆ ಕಾಲೇಜು ರೋಡ್ ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಮಳಿಗೆಯಲ್ಲಿ ಜ.10ರಂದು ಪ್ರೆಸ್ಟೀಜ್ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನ, ನವೀನ ಮಾದರಿಯ ಮಿಕ್ಸರ್ ಗ್ರೈಂಡರ್, ಎಂಡ್ಯೂರ ಪ್ರೊ ಮಿಕ್ಸರ್ ಗ್ರೈಂಡರ್ 1000watts ವಿತ್ 6 ಜಾರ್ ಮತ್ತು 6 ಅಸ್ಸೇಸರೀಸನ್ನು ಅನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಯಾಗಿ ಉತ್ಪನ್ನದ ಮೇಲೆ 25% ರಿಯಾಯಿತಿ ಹಾಗೂ 1795/- ಬೆಲೆ ಬಾಳುವ ಪ್ರೆಸ್ಟೀಜ್ ಸ್ಯಾಂಡ್ ವಿಚ್ ಮೇಕರ್ ಉಚಿತ ಆಫರ್ ಅನ್ನು ಗಣ್ಯರು ಹಾಗೂ ಗ್ರಾಹಕರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಸಂಸ್ಥೆ ಯ ಪಾಲುದಾರರಾದ ಪುಷ್ಪರಾಜ್ ಶೆಟ್ಟಿ, ಸುಮನ್ ಶೆಟ್ಟಿ, ರಘು ಶೆಟ್ಟಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸೇಲ್ಸ್ ವಿಭಾಗದ ಮುಖ್ಯಸ್ಥ ಸಂತೋಷ್ ಹಾಗೂ ಜಗದೀಶ್ ಮಾತಾಡಿ ಅತ್ಯಾಧುನಿಕ ತಂತ್ರ ಜ್ಞಾನದಿಂದ ಮೂಡಿ ಬಂದಿರುವ ಈ ಹೊಸ ಉತ್ಪನ್ನ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಉಜಿರೆ, ಬೆಳ್ತಂಗಡಿ ಶೋರೂಮ್ ನಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ಪ್ರೆಸ್ಟೀಜ್ ಸಂಸ್ಥೆಯ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಶುಭ0 ಜಾದವ್, ಟಿ ಎಸ್ ಒ ಸಂತೋಷ್ ಕುಮಾರ್, ಡೆಮೋನ್ಸ್ಟ್ರೇಟರ್ ಪ್ರಶಾಂತ್ ಉಪಸ್ಥಿತರಿದ್ದು, ಉತ್ಪನ್ನದ ಬಗ್ಗೆ ಮಾಹಿತಿ ನೀಡಿದರು.

ಮೊದಲ ಗ್ರಾಹಕ ಅಬ್ದುಲ್ ಹಜೀಜ್ ದಂಪತಿಗಳು ಅದರ ಸೌಲಭ್ಯ ಪಡೆದುಕೊಡು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here