ಉಜಿರೆಯಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರ- ಜನರಿಗೆ ಆರೋಗ್ಯದ ಜಾಗೃತಿ ಮೂಡಿದೆ: ಶರತ್ ಕೃಷ್ಣ ಪಡುವೆಟ್ನಾಯ

0

ಉಜಿರೆ: ಕಣ್ಣು ಆರೋಗ್ಯಪೂರ್ಣವಾಗಿದ್ದರೆ ದೇಹದ ಎಲ್ಲ ಅಂಗಗಳೂ ಕ್ರಿಯಾಶೀಲವಾಗಿ ರುತ್ತವೆ.ಇಂದು ಜನರಿಗೆ ಅರೋಗ್ಯದ ಬಗೆಗೆ ಹೆಚ್ಚು ಜಾಗೃತಿ ಮೂಡಿದೆ.ಗ್ರಾಮೀಣ ಪ್ರದೇಶದಲ್ಲಿ ನಗರದ  ಆಧುನಿಕ ಸೌಲಭ್ಯ ಸಿಗುವುದು ಕಷ್ಟ.ಈ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಅರೋಗ್ಯ ಶಿಬಿರ ವ್ಯವಸ್ಥೆಗೊಳಿಸಿ ಸಮಾಜದ ಸ್ವಾಸ್ಥ್ಯದ  ಚಿಂತನೆ ಮಾಡುತ್ತಿರುವ ಆದರ್ಶ ಸೇವಾ ಸಮಿತಿಯ ಸಮಾಜಮುಖಿ ಸೇವಾ ಕಾರ್ಯ ಅರ್ಥಪೂರ್ಣ ಹಾಗು ಆದರ್ಶ ಮಾದರಿಯಾಗಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಹೇಳಿದರು.

ಅವರು ಜ.9ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆಯ ರಾಮನಗರದ ಆದರ್ಶ ಸೇವಾ ಸಮಿತಿ ವತಿಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಯ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮತ್ತು  ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಹಾಗು ಉಜಿರೆಯ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತಿತರ ಸಂಘಟನೆಗಳ ಸಹಯೋಗದಿಂದ ನಡೆದ ಉಚಿತ ನೇತ್ರ ಪರೀಕ್ಷೆ ಮತ್ತು  ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆದರ್ಶ ಸೇವಾ ಸಮಿತಿ ಅಧ್ಯಕ್ಪ ರಮೇಶ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ವೇದಿಕೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಶ್ರೀ ಶಾರದಾ ಸೇವಾ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಕಾರ್ಯದರ್ಶಿ ಜಯಂತ ಶೆಟ್ಟಿ ಕುಂಟಿನಿ, ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಎನ್.ಮಾಧವ ಹೊಳ್ಳ, ಉಜಿರೆ ಎರ್ನೋಡಿ  ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಅಧ್ಯಕ್ಷ ಬಾಬು ಎರ್ನೋಡಿ, ಮಂಗಳೂರು ವೆನ್ ಲಾಕ್  ಆಸ್ಪತ್ರೆಯ ವೈದ್ಯೆ ಡಾ.ಪಲ್ಲವಿ ಮೊದಲಾದವರು ಉಪಸ್ಥಿತರಿದ್ದರು.

ಸಂಜೀವ ಶೆಟ್ಟಿ ಕುಂಟಿನಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.ಶಿಬಿರದಲ್ಲಿ ಉಜಿರೆ ಪರಿಸರದ  137  ಮಂದಿ ಕಣ್ಣು ಪರೀಕ್ಷೆ ನಡೆಸಿ, ಅವರಲ್ಲಿ 79 ಮಂದಿಗೆ ಚಿಕಿತ್ಸೆ ನೀಡಲಾಯಿತು.ಅಗತ್ಯವಿದ್ದ 16 ಮಂದಿಗೆ   ಉಚಿತ ಕನ್ನಡಕ ವಿತರಿಸಲಾಯಿತು.

LEAVE A REPLY

Please enter your comment!
Please enter your name here