ಮುಕ್ತ ರಾಷ್ಟ್ರೀಯ ಕರಾಟೆ ಪಂದ್ಯಕೂಟ- ಸಿರಾಜ್ ಎಚ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ, ಕತದಲ್ಲಿ ಬೆಳ್ಳಿ ಪದಕ

0

ಉಜಿರೆ: ಹಾಸನದಲ್ಲಿ ನಡೆದಂತಹ ಮುಕ್ತ ರಾಷ್ಟ್ರೀಯ ಕರಾಟೆ ಪಂದ್ಯಕೂಟದಲ್ಲಿ ಉಜಿರೆ ಶೋರೀನ್ ರಿಯೊ ಕರಾಟೆ ಅಸೋಸಿಯೇಷನ್ ನ ವಿದ್ಯಾರ್ಥಿ ಸಿರಾಜ್ ಎಚ್ ಇವರು ಸೀನಿಯರ್ ಬ್ಲಾಕ್ ಬೆಲ್ಟ್ ವಿಭಾಗದ ಕುಮಿತೆಯಲ್ಲಿ ಚಿನ್ನದ ಪದಕ ಮತ್ತು ಕತದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ.

ಇವರು ಗುರುವಾಯನಕೆರೆ ಶಕ್ತಿ ನಗರದ ಹಸನಬ್ಬ ಮತ್ತು ಅತಿಜಮ್ಮ ಅವರ ಪುತ್ರರಾಗಿದ್ದು, ಇವರು ಮೂಡಬಿದ್ರೆಯ ರೆನ್ಸಿ ನದೀಮ್ ಮತ್ತು ಉಜಿರೆಯ ಶಿಹಾನ್ ಅಬ್ದುಲ್ ರಹಿಮಾನ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here