ಬೆಳ್ತಂಗಡಿ: ಜೆ ಸಿ ಐ ಬೆಳ್ತಂಗಡಿ ಮಂಜುಶ್ರೀ ಇದರ ನೂತನ ಅಧ್ಯಕ್ಷ Jc HGF ರಂಜಿತ್ ಹೆಚ್.ಡಿ ಮತ್ತು ಅವರ ತಂಡದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.7ರಂದು ಬೆಳ್ತಂಗಡಿ ಜೇಸಿ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಲಯ 15ರ ಪೂರ್ವಾಧ್ಯಕ್ಷ ಸಂಪತ್ ಸುವರ್ಣ ಅವರು ಸೇರ್ಪಡೆಗೊಂಡ ಹದಿನಾಲ್ಕು ಹೊಸ ಜೇಸಿ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿ ಮಾತನಾಡಿ ಬೆಳವಣಿಗೆ ಮತ್ತು ಅಭಿವೃದ್ಧಿಯ ಸ್ಪೂರ್ತಿದಾಯಕ ಇತಿಹಾಸವನ್ನು ಹಂಚಿಕೊಂಡರು.ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ 15ರ ಅಧ್ಯಕ್ಷ ಗಿರೀಶ್ ಎಸ್ ಪಿ ಮಾತನಾಡಿ ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಬೆಂಬಲಿಸಲು ಸದಾ ಬದ್ಧನಾಗಿರುತ್ತೇನೆ ಎಂದರು.
ಗುರುವಾನಕೆರೆ ಎಕ್ಸೆಲ್ ಪಿ. ಯು. ಕಾಲೇಜು ಚೇರ್ ಮನ್ ಸುಮಂತ್ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಲಯ 15ರ ಉಪಾಧ್ಯಕ್ಷ ಜೆಎಫ್‌ಎಂ ಶಂಕರ್ ರಾವ್ ಅವರು ನೂತನ ಅಧ್ಯಕ್ಷ ಜೆಸಿ ರಂಜಿತ್ ಎಚ್ ಡಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಬಳಿಕ ನೂತನ ಅಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿ, ಈ ವರ್ಷದ ಕಾರ್ಯಕ್ರಮಗಳ ರೂಪರೇಷೆಯನ್ನು ವಿವರಿಸುತ್ತಾ, ಎಲ್ಲಾ ಪೂರ್ವ ಅಧ್ಯಕ್ಷರುಗಳ, ಸದಸ್ಯರುಗಳ ಮತ್ತು ಜೆ.ಸಿ ಯೆತಾರಾ ಬಂಧುಗಳ ಸಹಕಾರವನ್ನು ಕೋರಿದರು.ಬಳಿಕ ತಮ್ಮ ತಂಡದ ಇತರ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.
ಘಟಕದ ಕಾರ್ಯದರ್ಶಿಯಾಗಿ ಜೆಸಿ ಅನುದೀಪ್ ಜೈನ್, ಮಹಿಳಾ ಸಂಯೋಜಕಿಯಾಗಿ ಆಗಿ ಜೆಸಿ ಶೃತಿ ರಂಜಿತ್, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಸಮನ್ವಿತ್ ಅಧಿಕಾರ ಸ್ವೀಕರಿಸಿದರು.
ಮಾಜಿ ಅಧ್ಯಕ್ಷ ಚಿದಾನಂದ ಇಡ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಜೆಸಿ ಅರೋಲಿನ್ ಡಿಸೋಜ ಜೆಸಿ ವಾಣಿಯನ್ನು ವಾಚಿಸಿದರು.2023ರ ಅಧ್ಯಕ್ಷ ಜೆಎಫ್‌ಎಂ ಶಂಕರ್ ರಾವ್ ಸ್ವಾಗತಿಸಿದರು.ನೂತನ ಅಧ್ಯಕ್ಷರನ್ನು ಮಾಜಿ ಅಧ್ಯಕ್ಷ ಸಂತೋಷ ಕೋಟ್ಯಾನ್ ಪರಿಚಯಿಸಿದರು.ಘಟಕದ ಉಪಾಧ್ಯಕ್ಷರುಗಳಾದ ಜೆಸಿ ಪ್ರೀತಮ್ ಶೆಟ್ಟಿ, ಜೆಸಿ ಶೈಲೇಶ್ ಹಾಗೂ ಜೂನಿಯರ್ ಜೇಸಿಐ ಸಂಯೋಜಕರಾದ ಜೆಸಿ ರಕ್ಷಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.ಕೊಕ್ಕಡ ಕಪಿಲ, ಕಾರ್ಕಳ, ಮತ್ತು ಮಡಂತ್ಯಾರು ಜೆಸಿ ಅಧ್ಯಕ್ಷರುಗಳು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ನೂತನ ಕಾರ್ಯದರ್ಶಿ ಜೆಸಿ ಅನುದೀಪ್ ಜೈನ್ ವಂದಿಸಿದರು.
ಕಾರ್ಯಕ್ರಮದಲ್ಲಿ ವಲಯ 15ರ ಹಿಂದಿನ ಉಪಾಧ್ಯಕ್ಷೆ ಸೌಮ್ಯ ರಾಕೇಶ್, ನೂತನ ಉಪಾಧ್ಯಕ್ಷ ವಿಘ್ನೇಶ್ ಹಾಗು ವಿವಿಧ ಜೇಸಿಯೇತರರು ಉಪಸ್ಥಿತರಿದ್ದರು.