

ಬೆಳ್ತಂಗಡಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಪ್ರಭು ಶ್ರೀ ರಾಮಚಂದ್ರರ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪವಿತ್ರ ಮಂತ್ರಾಕ್ಷತೆಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ತನ್ನೆಲ್ಲ ಸ್ವಂತ ಕಾರ್ಯಗಳನ್ನ ಬದಿಗಿಟ್ಟು ಸಂಘಟನೆ ಒಂದೇ ಮೂಲ ಮಂತ್ರ ಎಂದು ಪುತ್ತೂರು ಜಿಲ್ಲೆ ಕಂಡ ಶ್ರೇಷ್ಠ ಜೇಷ್ಠ ಶ್ರೀ ರಾಮ ಜನ್ಮಭೂಮಿ ಹೋರಾಟಗಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಆಗಿದ್ದವರು, ಸಂಘಟನೆಯನ್ನು ಕಟ್ಟಿ ಬೆಳೆಸಿದವರು ಹಾಗೂ ಅಯೋದ್ಯೆಯ ಕರಸೇವಕರಾಗಿ, ಹಿರಿಯರಾದ ಮೋಹನ್ ರಾವ್ ಕಲ್ಮಂಜ ರವರಿಗೆ ವಿತರಿಸಲಾಯಿತು.