ವಿಲ್ಸನ್ ರೊಡ್ರಿಗಸ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ

0

ಉಜಿರೆ: ಇಲ್ಲಿಯ ಹಲಕ್ಕೆ ಮನೆಯ ಸಿಲ್ವೆಸ್ಟರ್ ರೊಡ್ರಿಗಸ್ ರವರ ಪುತ್ರ ವಿಲ್ಸನ್ ರೊಡ್ರಿಗಸ್ (34ವ) ಇಂದು ಬೆಳಿಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಗುಜರಾತ್ ನಲ್ಲಿ ಉದ್ಯೋಗದಲ್ಲಿದ್ದು ಇಂದು ಊರಿಗೆ ಬರುವುದರಲ್ಲಿದ್ದರು.

ಗುಜರಾತ್ ನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿ ಅಲ್ಲಿಯೇ ಬಿದ್ದರೆನ್ನಲಾಗಿದ್ದು, ಕೂಡಲೆ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ತಂದೆ ಸಿಲ್ವೆಸ್ಟರ್ ರೊಡ್ರಿಗಸ್, ತಾಯಿ ಜೋಸ್ಪಿನ್ ರೊಡ್ರಿಗಸ್, ಸಹೋದರಿ ವೆರಿನ ರೊಡ್ರಿಗಸ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

p>

LEAVE A REPLY

Please enter your comment!
Please enter your name here