



ಕಾಯರ್ತಡ್ಕ: ಜ.4 ರಂದು ಕಾಯರ್ತಡ್ಕ ಶಾಲೆಗೆ ಮುಖ್ಯ ಗುರುಗಳಾಗಿ ಆಗಮಿಸಿದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ರವರಿಗೆ ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.



ಈ ಸಂಧರ್ಭದಲ್ಲಿ ಜೆಸಿಐ ಕೊಕ್ಕಡ ಇದರ ಅಧ್ಯಕ್ಷ ಜೇಸಿ ಹೆಚ್ ಜಿ ಎಪ್ ಸಂತೋಷ್ ಜೈನ್, ಕಾರ್ಯದರ್ಶಿ ಜೇಸಿ ಅಕ್ಷತ್ ರೈ, ಕಳೆಂಜ ಸದಾಶಿವೇಶ್ವರ ದೇವಳದ ಅಧ್ಯಕ್ಷ ಕೆ.ಶ್ರೀಧರ್ ರಾವ್, ಗ್ರಾಮ ಅಭ್ಯುದಯದ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಿ.ಟಿ ಸಬಾಸ್ಟಿನ್, ಬೆಳ್ಳಾರೆ ಸೀತಾರಾಮ ರೈ, ರಾಜಾರಾಂ.ಟಿ ಅಧ್ಯಾಪಕ ವೃಂದ, ಮಕ್ಕಳು ಉಪಸ್ಥಿತರಿದ್ದರು.








