ಮಾಲಾಡಿ: ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಛೇರಿ ಅಧೀಕ್ಷರಾಗಿದ್ದ ಮೋಹಿನಿ.ಎನ್ ಅವರಿಗೆ ವಯೋ ನಿವೃತ್ತಿ ವಿದಾಯ ಕೂಟ ಕಾರ್ಯಕ್ರಮ

0

ಮಾಲಾಡಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇಲ್ಲಿಯ ಕಛೇರಿ ಅಧೀಕ್ಷರಾದ ಮೋಹಿನಿ.ಎನ್ ಇವರು ಸುಮಾರು 26 ವರ್ಷ 8 ತಿಂಗಳುಗಳ ಕಾಲ ಸರ್ಕಾರಿ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಡಿ.31ರಂದು ವಯೋ ನಿವೃತ್ತಿಗೊಂಡಿದ್ದು, ಇದರ ಅಂಗವಾಗಿ ಡಿ.30ರಂದು ವಯೋ ನಿವೃತ್ತಿ ವಿದಾಯ ಕೂಟವನ್ನು ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು.

ವಿದಾಯ ಕೂಟ ಸಮಾರಂಭದಲ್ಲಿ “ಸಭಾ ಅಧ್ಯಕ್ಷ” ಸ್ಥಾನವನ್ನು ಸಂಸ್ಥೆಯ ಪ್ರಾಚಾರ್ಯರಾದ ರಮೇಶ್ ನಾಯ್ಕ ರವರು ವಹಿಸಿಕೊಂಡಿದ್ದು, ಮುಖ್ಯ ಅಥಿತಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಎಂ.ಎಸ್ ಸುಬ್ರಮಣ್ಯ, ನಿವೃತ್ತ ಆಡಳಿತ ಅಧಿಕಾರಿಯಾದ ಗಣೇಶ್ ಹೆಚ್.ಎಸ್, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಬೊಂದೇಲ್, ಮಂಗಳೂರು ಇಲ್ಲಿನ ನಿವೃತ್ತ ಪ್ರಾಚಾರ್ಯರಾದ ಕಮಲಾಕ್ಷಿ ಮತ್ತು ಸ.ಕೈ.ತ.ಸಂಸ್ಥೆ(ಮಹಿಳಾ) ನರಿಮೊಗರು, ಪುತ್ತೂರು ಇಲ್ಲಿಯ ಕಚೇರಿ ಅದೀಕ್ಷರಾದ ಹೇಮಾವತಿ ಇವರು ಉಪಸ್ಥಿತರಿದ್ದು, ಸಿಬ್ಬಂದಿ ವರ್ಗದವರು ಮತ್ತು ತರಬೇತಿದಾರರು ಮೋಹಿನಿ.ಎನ್ ಇವರ ಮುಂದಿನ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಪುರಂಧರ.ಕೆ ಇವರು ಸ್ವಾಗತಿಸಿ, ವೀರೇಂದ್ರ ಕುಮಾರ್ ಇವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿ, ಕು.ವಿನುತ ಇವರು ವಂದಿಸಿದರು.

LEAVE A REPLY

Please enter your comment!
Please enter your name here