ಬೆಳ್ತಂಗಡಿ ತಾಲೂಕಿನಾದ್ಯಂತ ಚರ್ಚ್‌ಗಳಲ್ಲಿ ಹೊಸ ವರ್ಷದ ಸಂಭ್ರಮ

0

ಬೆಳ್ತಂಗಡಿ: ಮಂಗಳೂರು ಧರ್ಮಪ್ರಾಂತಕ್ಕೆ ಒಳಪಟ್ಟ ತಾಲೂಕಿನ 12 ಚರ್ಚ್ ಸಹಿತ, ಬೆಳ್ತಂಗಡಿ ಧರ್ಮ ಪ್ರಾಂತಕ್ಕೊಳಪಟ್ಟ ಚರ್ಚ್‌ಗಳಲ್ಲಿ ಡಿ.31 ರಂದು ರಾತ್ರಿ ಕಳೆದ ಒಂದು ವರ್ಷದಲ್ಲಿ ಮಾಡಿದ ಒಳಿತಿಗಾಗಿ ವಿಶೇಷ ಪ್ರಾರ್ಥನಾ ವಿಧಿವಿಧಾನ ಆರಾಧನೆ ಮತ್ತು ಕೃತಜ್ನ್ಯತೆ ದಿವ್ಯ ಬಲಿ ಪೂಜೆ ನೆರವೇರಿತು.

ಜ.1ರಂದು ಮುಂಜಾನೆ ಚರ್ಚ್‌ಗಳಲ್ಲಿ ಹೊಷ ವರ್ಷದ ಪ್ರಥಮ ವಿಶೇಷ ದಿವ್ಯ ಬಲಿ ಪೂಜೆ ನೆರವೇರಿತು.ಸೇರಿದವರು ರಾತ್ರಿ ಮತ್ತು ಹೊಸ ವರ್ಷದ ಶುಭಾಶಯ ಹಂಚಿಕೊಂಡರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್, ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್, ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಪ್ರಧಾನ ದೇವಾಲಯ, ಉಜಿರೆ ಸಂತ ಅಂತೋನಿ, ಮುಂಡಾಜೆ, ತೋಟತ್ತಾಡಿ, ಗಂಡಿಬಾಗಿಲು, ಇಂದಬೆಟ್ಟು ವೇಣೂರು, ಅಳದಂಗಡಿ, ನಾಳ, ನೈನಾಡು, ಗರ್ಡಾಡಿ, ಬದ್ಯಾರು, ಅರ್ವ, ನಾರಾವಿ ಮಂಜೊಟ್ಟಿ, ಇಂದಬೆಟ್ಟು ಬೆದ್ರಬೆಟ್ಟು, ಕುತ್ಲೂರು, ಶಿರ್ಲಾಲ್, ಶಿಬಾಜೆ, ಕೊಕ್ಕಡ, ಧರ್ಮಸ್ಥಳ, ಕಾಯರ್ತಡ್ಕ ಸೇರಿದಂತೆ ಪ್ರಮುಖ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ ಪ್ರಧಾನ ಬಲಿ ಪೂಜೆ ಅರ್ಪಿಸಿ ಸಂದೇಶ ನೀಡಿದರು.ಪ್ರಧಾನ ಧರ್ಮ ಗುರು ವ.ಫಾ.ಜೇಮ್ಸ್ ಡಿಸೋಜ, ದಯಾಳ್ ಭಾಗ್ ಆಶ್ರಮದ ಧರ್ಮ ಗುರುಗಳು ಭಾಗವಹಿಸಿದ್ದರು.ನಂತರ ವೈ.ಸಿ.ಎಸ್.ಸಂಘಟನೆಯಿಂದ ಹೊಸ ವರ್ಷದ ಕೇಕ್ ಏಲಂ ನಡೆಯಿತು.

LEAVE A REPLY

Please enter your comment!
Please enter your name here