


ಓಡಿಲ್ನಾಳ: ಮಕ್ಕಳಿಗೆ ಧರ್ಮದ ಚಿಂತನೆಯನ್ನು ಕಲಿಸಿಕೊಡುವ ಕೆಲಸ ಹೆತ್ತವರ ಕರ್ತವ್ಯವಾಗಿದೆ.ದೇವರ ಬಲಿ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಡಾ.ಪ್ರದೀಪ್ ನಾವೂರು ಹೇಳಿದರು.
ಅವರು ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀರಾಮನಗರ ಮೈರಲ್ಕೆ ಓಡಿಲ್ನಾಳ ಇಲ್ಲಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವದಲ್ಲಿ ಡಿ.30ರಂದು ಜರಗಿದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಕುವೆಟ್ಟು ಗ್ರಾ ಪಂ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಕುಲಾಲ್, ಆಡಳಿತ ಮಂಡಳಿ ಕಾರ್ಯದರ್ಶಿ ವಿಮಲಾಕ್ಷ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಸಮಿತಿ ಅಧ್ಯಕ್ಷ ನಿತೇಶ್ ಕುಮಾರ್, ಸುದೀಪ್ ಶೆಟ್ಟಿ, ಉಪಾಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಭಜನಾ ಮಂಡಳಿ ಅಧ್ಯಕ್ಷ ಯೋಗಿಶ್ ಅಡ್ಡ ಕೊಡಂಗೆ, ದೇವಸ್ಥಾನದ ಟ್ರಸ್ಟಿನ ಸದಸ್ಯರು ಮೋಹನ್ ಭಟ್ ಮೈರಾರು, ಚಿದಾನಂದ ಇಡ್ಯ, ಚಿನ್ನಯ ಮೂಲ್ಯ ಪರಾರಿ, ಲಕ್ಷ್ಮಿಕಾಂತ್ ಶೆಟ್ಟಿ ಮೂಡೈಲು, ವಸಂತ ಮಠ, ಗೋಪಾಲ ಬನ, ಹರೀಶ್ ನ್ಯಾಕ್ ಭದ್ರಕಜೆ, ವಾಮನ ಮೂಲ್ಯ ಮಡಂತಿಲ, ದೇವಿಪ್ರಸಾದ್ ಮೂಲೋಟ್ಟು, ಮೀನಾಕ್ಷಿ ಮೈರಲ್ಕೆ, ಗುರುರಾಜ್ ಪೊಡುಂಬ, ಸತೀಶ್ ಮೈರಲ್ಕೆ ಮತ್ತಿತರರು ಉಪಸ್ಥಿತರಿದ್ದರು.
ಸುದೀಪ್ ಶೆಟ್ಟಿ ಸ್ವಾಗತಿಸಿ, ವಿಠಲ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರೂಪಿಸಿ, ನಿತೇಶ್ ಕುಮಾರ್ ದನ್ಯವಾದವಿತ್ತರು.
ದೇವಸ್ಥಾನದಲ್ಲಿ ಬೆಳಿಗ್ಗೆ ಗಣಹೋಮ, ಶೂಡರ ಬಲಿ ಉತ್ಸವ, ಕಲಶಾಭಿಷೇಕ ಮಹಾ ಪೂಜೆ, ರಾತ್ರಿ ಭೂತ ಬಲಿ ಉತ್ಸವ ಜರಗಿತು.ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.