


ಧರ್ಮಸ್ಥಳ: ಹೊಸ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಭಕ್ತರ ಸ್ವಾಗತಕ್ಕೆ ದೇಗುಲವು ಫಲಪುಷ್ಪಗಳಿಂದ ಕಂಗೊಳಿಸುತ್ತಿದೆ.

ಬೆಂಗಳೂರಿನ ಟಿವಿಎಸ್ ಉದ್ಯಮಿಯಾಗಿರುವ ಗೋಪಾಲ್ ರಾವ್ ಹಾಗೂ ಇತರ ಉದ್ಯಮಿಗಳಾದ ಆನಂದ, ಮಂಜು, ಪುಟ್ಟಸ್ವಾಮಿ, ರಾಜು ಜತೆಗೂಡಿ ಬೆಂಗಳೂರಿನ ಶರವಣ್ ಅವರ ನೂರು ಮಂದಿ ಪುಷ್ಪಾಲಂಕಾರ ಮಾಡುವಲ್ಲಿ ಸಹಕರಿಸಿದ್ದಾರೆ.ಕಳೆದ 15 ವರ್ಷಗಳಿಂದ ಅವರು ಈ ಸೇವೆಯನ್ನು ನೀಡುತ್ತಿದ್ದಾರೆ.

ದೇಗುಲದ ಮುಖಮಂಟಪ, ಒಳಾಂಗಣ, ಹೊರಾಂಗಣ, ಗೋಪುರ, ಹೆಗ್ಗಡೆಯವರ ಬೀಡು ಸೇರಿದಂತೆ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದ ಹಣ್ಣು, ವಿದೇಶಿ, ಸಹಿತ ಸ್ವದೇಶಿ ಹೂಗಳು, ಕೊಯಮತ್ತೂರಿನ ಬಾಳೆದಿಂಡು, 8000 ತೆಂಗಿನಕಾಯಿ, 1 ಟನ್ ಬದನೆ, ಜೋಳ, ಸೇಬು, ಎಳನೀರು, ಡ್ರ್ಯಾಗನ್ ಫ್ರೂಟ್, ಅಡಿಕೆ ಸಹಿತ ವಿವಿಧ ಹಣ್ಣುಗಳಿಂದ ಅಲಂಕರಿಸಲಾಗಿದೆ.
ದೇಗುಲದ ಮುಂಭಾಗ ಶಿವಪಾರ್ವತಿ, ಷಣ್ಮುಖ, ಗಣೇಶನ ಪ್ರತಿಕೃತಿಗಳಿಂದ ಸಾಂಪ್ರದಾಯಿಕವಾಗಿ ಅಲಂಕಾರ ನಡೆಸಲಾಗಿದೆ.ಒಳಾಂಗಣದಲ್ಲಿ ಹೂಗಳ ತೋರಣ ಭಕ್ತರನ್ನು ಮಂತ್ರಮುಗ್ಧಗೊಳಿಸಿದೆ.