ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನ ಮಾಯ ಇದರ ವಾರ್ಷಿಕ ಜಾತ್ರಾಮಹೋತ್ಸವ ಫೆ.20 ರಿಂದ 24 ರವೆಗೆ ನಡೆಯಲಿದೆ.
ಇದರ ಅಂಗವಾಗಿ ಊರವರ ಭಕ್ತರ ಸಮಾಲೋಚನಾ ಸಭೆ ಡಿ.31 ರಂದು ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್.ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾಯಗುತ್ತು ಪುಷ್ಪದಂತ ಜೈನ್, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶಿವಕುಮಾರ್ ಬಾರಿತ್ತಾಯ ಪಾರಳ, ರಾಜಪ್ಪ ಗೌಡ ಪುಚ್ಚೆಹಿತ್ಲು, ಗಂಗಯ್ಯ ಗೌಡ ಅದವೂರು, ನಾಣ್ಯಪ್ಪ ಪೂಜಾರಿ ಮುಂಡ್ರೋಟ್ಟು, ಸುಕನ್ಯಾ ನಾರಾಯಣ ಸುವರ್ಣ, ಚಂದ್ರಾವತಿ, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಗ್ರಾಮಾಭಿವೃದ್ಧಿ ಯೋಜನೆಯ ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ದಿನೇಶ್ ಕೋಟ್ಯಾನ್, ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಮಾಯ ಮಹೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ಗ್ರಾಮಸ್ಥರು, ಊರ ಭಕ್ತರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಸ್ವಾಗತಿಸಿ, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು ನಿರೂಪಿಸಿದರು.