ಪಾರೆಂಕಿ: ಮಡಂತ್ಯಾರು ಸಮೀಪದ ಹುಪ್ಪ ಅಂಗನವಾಡಿ ಕೇಂದ್ರದಲ್ಲಿ ಡಿ 20 ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಬಾಲಮೇಳ ಕಾರ್ಯಕ್ರಮವು ಗಣ್ಯರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಜರಗಿತು.
ಪುಟಾಣಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು ಸಮಾರಂಭದಲ್ಲಿ ರೋಟರಿ ಕ್ಲಬ್ ಮಡಂತ್ಯಾರು ಇದರ ಅಧ್ಯಕ್ಷ ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ರಾವ್ ಮಾತನಾಡಿ ಶುಭ ಹಾರೈಸಿದರು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಮರಿನಾ ಅನಿತಾ ಪೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ರೂಪ ನವೀನ್, ಉಪಾಧ್ಯಕ್ಷ ಗೋಪಾಲಕೃಷ್ಣ ಕೆ, ಸದಸ್ಯರಾದ ವಿಶ್ವನಾಥ ಪೂಜಾರಿ, ಕಿಶೋರ್ ಶೆಟ್ಟಿ, ಸಂಗೀತ ಶೆಟ್ಟಿ, ಮೋಹಿನಿ, ರಾಜೀವ್, ರೋಟರಿ ಕ್ಲಬ್ ಕಾರ್ಯದರ್ಶಿ ನಿತ್ಯಾನಂದ ಹೆಗ್ಡೆ, ಆರೋಗ್ಯ ಕಾರ್ಯಕರ್ತೆ ಜೆಲ್ಸಿ ಪೆರ್ನಾಂಡಿಸ್, ಥೆರಪಿಸ್ಟ್ ಶಬ್ನಮ್ ಸಿ ಎಚ್ ಒ ಕಾರ್ಯಕ್ರಮಕ್ಕೆ ಶುಭಹಾರೈಸುವುದರೊಂದಿಗೆ ಅಂಗನವಾಡಿಯ ಅಬಿವೃದ್ಧಿಗೆ ಸಹಕರಿಸುವ ಭರವಸೆಯನ್ನು ನೀಡಿದರು.
ಮಡಂತ್ಯಾರು ಗ್ರಾ.ಪಂ ವತಿಯಿಂದ ಅಂಗನವಾಡಿಗೆ ಕೊಡುಗೆಯಾಗಿ ನೀಡಿದ ಜಾರುಬಂಡಿಯ ಉದ್ಘಾಟನೆ ಜರಗಿತು.ಪುಟಾಣಿ ಮಕ್ಕಳೀಗೆ ವಿವಿದ ಛದ್ಮವೇಷ ಸಾಂಸ್ಕೃತಿಲ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯತು.ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮಧ್ಯಾಹ್ನದ ಬೋಜನದ ವ್ಯವಸ್ಥೆ ಆಯೋಜಿಸಿದ್ದರು.
ಸ್ಥಳಿಯ ಸಂಘ ಸಂಘ ಸಂಸ್ಥಗಳು ಹಾಗೂ ಊರ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಶ್ವಿಯಾಗಿ ಮೂಡಿಬಂತು.ನಮಿತ ಕಾರ್ಯಕ್ರಮ ನಿರೂಪಿಸಿದರು. ಅಂಗನಾಡಿ ಕಾರ್ಯಕರ್ತೆ ಲೀಲಾವತಿ ಸ್ವಾಗತಿಸಿದರು.