ಮೇಲಂತಬೆಟ್ಟು: ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮದ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಶತಮಾನೋತ್ಸವ ಕಾರ್ಯಕ್ರಮ ಡಿ.22 ರಂದು ಜರಗಿತು.
ಶತಮಾನೋತ್ಸವ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು.ನವೀಕರಣಗೊಂಡ ಶಾಲಾ ಕೊಠಡಿಯನ್ನು ಪರಿಷತ್ ಸದಸ್ಯ ಹರೀಶ್ ಕುಮಾರ್, ಆಧುನಿಕ ಸ್ಮಾರ್ಟ್ ತರಗತಿಯನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಶಾಲಾ ಪ್ರವೇಶ ದ್ವಾರವನ್ನು ಉದ್ಯಮಿ ರಾಘ್ನೇಶ್, ತರಗತಿ ಕೊಠಡಿಯನ್ನು ಪಂಚಾಯತ್ ಅಧ್ಯಕ್ಷೆ ಸವಿತಾ, ಪುತ್ತೂರು ಯೋಜನೆಯ ನಿರ್ದೇಶಕ ಪ್ರವೀಣ್, ನೋಟರಿ ವಕೀಲ ಭಗೀರಥ ಜಿ., ನವೀಕೃತ ಅಡುಗೆ ಕೋಣೆಯನ್ನು ಸಿಂತಿಯಾ ವೇಗಸ್ ಸುರ್ಯ, ಸ್ಫೂರ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಜೆಸಿಂತಾ ಮೋನಿಸ್ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೈಲೇಶ್ ಕುಮಾರ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ್, ಕ.ರಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಹೆಚ್.ಕೆ., ಸಿ.ಆರ್.ಪಿ ರಾಜೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ನೂಜೋಡಿ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ನಾರಾಯಣ ಪೂಜಾರಿ, ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸದಸ್ಯರಾದ ಚಂದ್ರರಾಜ್ ನೂಜೇಲು, ವೇಣುಗೋಪಾಲ, ದೀಪಿಕಾ, ಗುರುವಾಯನಕೆರೆ ಜುಮ್ಮಾ ಮಸೀದಿ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್, ಭಗವತಿ ದೇವಸ್ಥಾನದ ಮೊಕ್ತೇಸರ ಯೋಗೀಶ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಹಳೆಕೋಟೆ ಸತ್ಯಸಾಯಿ ಭಜನಾ ತಂಡದಿಂದ ಭಜನೆ ನಡೆಯಿತು.
ದಾನಿಗಳಿಗೆ ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರಿಗೆ ಸನ್ಮಾನ ನೆರವೇರಿಸಲಾಯಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್.ಯೋಗೀಶ್ ಕುಮಾರ್ ನಡಕ್ಕರ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ರೂಪ ಎಂ.ಬಿ ವರದಿ ವಾಚಿಸಿದರು.ಶಿಕ್ಷಕ ಧರಣೆಂದ್ರ ಕುಮಾರ್ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಊರವರು, ಹೆತ್ತವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.