ನಡ: ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿಯ ವತಿಯಿಂದ ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಸಮಾಲೋಚನ ಸಭೆ ಜರಗಿತು.
ಸಭೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಮೋಹನ್ ರವರು ಉದ್ಘಾಟಿಸಿ ಮಾತನಾಡುತ್ತಾ, ಮಾಡಿ ಕಲಿ ಎಂಬ ತತ್ವದಡಿ ಮಕ್ಕಳ ಕಲಿಕೆಯನ್ನು ಸಾಧಿಸಬಹುದು. ಏನೇ ತಂತ್ರಜ್ಞಾನ ಬಂದರೂ ಕಲಿಕೆಗೆ, ಕಲಿಕಾ ವ್ಯವಸ್ಥೆಗೆ ಅದು ಪರ್ಯಾವಲ್ಲ.ಅಂತಿಮವಾಗಿ ಶಿಕ್ಷಕರೇ ಪ್ರಯೋಗಶೀಲ ಮತ್ತು ಪರಿಣಾಮಕಾರಿ ಪಾತ್ರ ನಿರ್ವಹಿಸುವವರು.ಆದ್ದರಿಂದ ಕಾರ್ಯಾಗಾರದಲ್ಲಿ ಚರ್ಚಿತ ವಿಷಯಗಳು ತರಗತಿಯ ಕೋಣೆಗೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗದ ರಾಮಕೃಷ್ಣ ಭಟ್ ಬೆಳಾಲು, ಮಹಮ್ಮದ್ ರಿಯಾಜ್ ಕೊಕ್ರಾಡಿ, ವಸಂತ ನಾಯ್ಕ ಪುತ್ತಿಲ, ಪೂರ್ಣಿಮಾ ಬೆಳ್ತಂಗಡಿ, ಚೈತ್ರ ಪಡಂಗಡಿ ಜಗನ್ನಾಥ ಗರುವಾಯನಕೆರೆ, ಶ್ರೀನಿವಾಸ ಎಂ ನೇಲ್ಯಡ್ಕ ಇವರು ಕಾರ್ಯಾಗಾರವನ್ನು ಸಡೆಸಿಕೊಟ್ಟರು.
ವಲಯ ಸಂಪನ್ಮೂಲ ಅಧಿಕಾರಿ ಸುಜಾತಾರವರು ಶುಭಕೋರಿದರು.ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಿಯಾಜ್, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ಭಟ್ ಬೆಳಾಲು ಇವರಿಗೆ ಮತ್ತು ನಡ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ, ಶಾಲೆಯಲ್ಲಿ ಸಮಾಜ ವಿಜ್ಞಾನ ಪ್ರಯೋಗಾಲಯ ತೆರೆದ ಸಾಧನೆಗಾಗಿ ಶಿವಪುತ್ರ ಸುನಗಾರರವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಶಿವಪುತ್ರ ಸುನಗಾರ್ ಸ್ವಾಗತಿಸಿ, ಗೌರವ ಶಿಕ್ಷಕಿ ಮಿಸ್ತ್ರಿಯ ವಂದಿಸಿದರು, ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.