ನೆಲ್ಯಾಡಿಯಲ್ಲಿ ಎಮಿರೇಟ್ಸ್ ಕ್ರಿಕೆಟ್ ತಂಡದ ಜೆರ್ಸಿ ಅನಾವರಣ

0

ನೆಲ್ಯಾಡಿ: ನೆಲ್ಯಾಡಿಯ ಎಲೈಟ್ ಒಳಾಂಗಣ ಕೋರ್ಟ್ ನಲ್ಲಿ ಡಿ.20ರ ಸಂಜೆ ನಡೆದ ಸರಳ ಸಮಾರಂಭದಲ್ಲಿ ನೆಲ್ಯಾಡಿಯ ಪ್ರತಿಭಾವಂತ ಕ್ರಿಕೇಟ್ ಆಟಗಾರರ ಎಮಿರೇಟ್ಸ್ ಕ್ರಿಕೆಟ್ ಕ್ಲಬ್ ಇದರ ಜೆರ್ಸಿ ಅನಾವರಣ ಸಮಾರಂಭವು ವರ್ಣ ರಂಜಿತ ಸರಳ ಸಮಾರಂಭದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ನ ಧರ್ಮಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ನೆಲ್ಯಾಡಿಯ ಸೌಹಾರ್ದ ವಾತಾವರಣಕ್ಕೆ ಕ್ರೀಡೆಯ ಕೊಡುಗೆ ಬಹು ದೊಡ್ಡದಾಗಿದ್ದು ಶಾಂತಿ, ಸಹಕಾರ ಪರಸ್ಪರ ವಿಶ್ವಾಸ ಬೆಳೆಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.ಹಾಗೆಯೇ ಯುವ ಜನರು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯುವ ಶಕ್ತಿ ಕ್ರೀಡೆಗೆ ಇದೆ ಎಂದು ಧರ್ಮ ಗುರುಗಳು ಈ ಸಂದರ್ಭದಲ್ಲಿ ತಿಳಿಸಿದರು.

ಎಲೈಟ್ ನ ಮಾಲೀಕರಾದ ಶಾಜಿ ವರ್ಗೀಸ್, ಶಿಬು ವರ್ಗೀಸ್, ಸಮಂತ್ ಕುಮಾರ್ ಬಸ್ತಿ, ಎಮಿರೇಟ್ಸ್ ತಂಡದ ಮಾಲೀಕರಾದ ಸಾದಿಕ್ ನೆಲ್ಯಾಡಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನವಾಸ್ ಕೋಲ್ಪೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here