ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಮರ ಬಿದ್ದು ಕಟ್ಟಡಕ್ಕೆ ಹಾನಿ-ತಪ್ಪಿದ ದೊಡ್ಡ ದುರಂತ

0

ನೆರಿಯ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಇಂದು (ಡಿ.21) ಬೆಳಿಗ್ಗೆ 6 ಗಂಟೆಗೆ ದೊಡ್ಡ ಮರ ಬಿದ್ದು ಕಟ್ಟಡಕ್ಕೆ ಹಾನಿಯಾಗಿದೆ.

ಇಲ್ಲಿ ಯಾವುದೇ ಒಳ ರೋಗಿಗಳು ದಾಖಲಾಗದೆ ಇರೋದರಿಂದ ರಾತ್ರಿ ಹೊತ್ತು ಸಿಬ್ಬಂದಿಗಳು ಇರುವುದಿಲ್ಲ.ಹಾಗಾಗಿ ಯಾವುದೇ ಪ್ರಾಣಪಾಯ ಆಗಿರುವುದಿಲ್ಲ.ಹಗಲು ಹೊತ್ತಿನಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚು ಈ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ.ದೊಡ್ಡ ದುರಂತವೊಂದು ತಪ್ಪಿದೆ.

ಘಟನೆಯಿಂದ ಮಹಿಳೆಯರ ಮತ್ತು ಪುರುಷರ ವಾರ್ಡ್ ಸಂಪೂರ್ಣ ಹಾನಿಯಾಗಿದೆ.ಜೊತೆಗೆ ಸಂಚಾರಿ ಘಟಕದ ಕೊಠಡಿ, ಆಸ್ಪತ್ರೆಯ ಪ್ರಯೋಗಾಲಯಕ್ಕೂ ಹಾನಿಯಾಗಿದ್ದು ಸ್ಥಳಾಂತರಗೊಳಿಸಲು ತಯಾರಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here