ಕರ್ನಾಟಕ ಜಾನಪದ ಸ್ಪರ್ಧಾ ಕೂಟದಲ್ಲಿ ಬೆಳ್ತಂಗಡಿ ಸ.ಪ್ರ.ದ ಕಾಲೇಜಿಗೆ ಪ್ರಥಮ ಬಹುಮಾನ

0

ಬೆಳ್ತಂಗಡಿ: ಡಿ.11ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್, ಬೆಂಗಳೂರು ಜಿಲ್ಲಾ ಘಟಕ, ದ.ಕ ಇದರ ಆಶ್ರಯದಲ್ಲಿ ಜಾನಪದ ಕಡಲೋತ್ಸವ, ಜಾನಪದ ಪ್ರದರ್ಶನ, ಆಹಾರ ಮೇಳ ಇದರ ಪ್ರಯುಕ್ತ ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಆಚಾರ- ವಿಚಾರ ಪ್ರತಿಬಿಂಬಿಸುವ ವಿಷಯಧಾರಿತ ಜಾನಪದ ಸ್ಪರ್ಧಾಕೂಟದಲ್ಲಿ ಬೆಳ್ತಂಗಡಿ ಸ.ಪ್ರ.ದ ಕಾಲೇಜಿನ ತಂಡವು ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಹಕರಿಸಿದ ಅನೀಶ್, ಸುರೇಶ್ ಡಿ ಇವರಿಗೆ ಪ್ರಾಂಶುಪಾಲರಾದ ಪ್ರೊ. ರಾಘವ ಎನ್., ಹಾಗೂ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here