ಬಳ್ಳಮಂಜ: ಇತಿಹಾಸ ಪ್ರಸಿದ್ದ ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಡಿ.18ರಂದು ಷಷ್ಠಿ ಮಹೋತ್ಸವ ಮಹಾರಥೋತ್ಸವ ನಡೆಯಿತು.
ಡಿ.17ರಂದು ಕೊಪ್ಪರಿಗೆ ಮುಹೂರ್ತ, ಅಂಗಪ್ರದಕ್ಷಿಣೆ, ಬೆಳಿಗ್ಗೆ 10ಕ್ಕೆ ವೇಣುವಾದನ ವಿದ್ವಾನ್ ಕೃಷ್ಣಗೋಪಾಲ ಪುಂಜಾಲಕಟ್ಟೆ ಮತ್ತು ಬಳಗದವರಿಂದ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7ಕ್ಕೆ ರಂಗಪೂಜೆ, ಪಂಚಮಿ ಉತ್ಸವ ನಡೆಯಿತು.
ಡಿ.18ರಂದು 7 ರಿಂದ ಷಷ್ಠಿ ಉತ್ಸವ ಪ್ರಾರಂಭಗೊಂಡು, 11 ಗಂಟೆಗೆ ಬ್ರಹ್ಮರಥೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಆನುವಂಶೀಯ ಆಡಳಿತ ಮೊಕೇಸರ ಡಾ। ಎಂ.ಹರ್ಷ ಸಂಪಿಗೆತ್ತಾಯ, ಡಾ.ಶಿವಪ್ರಸಾದ್, ಡಾ.ಗುರುಪ್ರಸಾದ್ ತಂತ್ರಿವರ್ಯರು, ಪ್ರಧಾನ ಅರ್ಚಕರು, ಅರ್ಚಕರು, ಊರ ಪರ ಊರ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಿದರು.ವೀರಕೇಸರಿಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು.
p>