


ಬೆಳ್ತಂಗಡಿ : ಕಳೆಂಜ ಗ್ರಾಮದ ಲಕ್ಷ್ಮಿ ನಾರಾಯಣ ಗೌಡ (39) ಎಂಬವರಿಗೆ ಸಂಬಂಧಿತರಾದ ಹೊನ್ನಪ್ಪ ಗೌಡ, ಮೇದಪ್ಪ ಗೌಡ ಹಾಗೂ ಕುಸುಮಾ ಎಂಬುವವರು ಹಲ್ಲೆ ಮಾಡಿರುವ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಲಕ್ಷ್ಮಿ ನಾರಾಯಣ ಗೌಡ ಮತ್ತು ಹೊನ್ನಪ್ಪ ಗೌಡ, ಮೇದಪ್ಪ ಗೌಡ ಹಾಗೂ ಕುಸುಮಾ ಅವರಿಗೆ ಜಾಗದ ವಿಚಾರದಲ್ಲಿ ತಕರಾರುರಿದ್ದು, ಲಕ್ಷ್ಮಿ ನಾರಾಯಣ ಅವರ ಮನೆಯ ಸಮೀಪದ ಖಾಲಿ ಜಾಗದಲ್ಲಿ ಲಕ್ಷ್ಮೀ ನಾರಾಯಣ ಅವರ ಅಣ್ಣ ಹೊನ್ನಪ್ಪರವರು ಅಡಿಕೆ ಒಣ ಹಾಕುವ ಕುರಿತ ತಕರಾರು ಮಾಡಿದ್ದು, ಡಿ.13ರಂದು ಬೆಳಿಗ್ಗೆ ಆರೋಪಿಗಳು ದೂರುದಾರರನ್ನು ಅವ್ಯಾಚವಾಗಿ ಬೈದು, ಹೊನ್ನಪ್ಪ ಗೌಡರು ಕೈಯಲ್ಲಿದ್ದ ಕಬ್ಬಿಣದ ಸರಳಿನಿಂದ ಲಕ್ಷ್ಮಿ ನಾರಾಯಣ ಅವರ ತಲೆಗೆ ಆರೋಪಿಗಳೊಂದಿಗೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 102/2023 ಕಲಂ:341.504.324.323.506.R/W.34 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








