ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ರಚನೆ- ಅಧ್ಯಕ್ಷರಾಗಿ ರಂಜನ್.ಜಿ ಗೌಡ, ಉಪಾಧ್ಯಕ್ಷರಾಗಿ ಶಿವಕಾಂತ ಗೌಡ ಆಯ್ಕೆ

0

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ರಂಜನ್.ಜಿ ಗೌಡ, ಉಪಾಧ್ಯಕ್ಷರಾಗಿ ಶಿವಕಾಂತ ಗೌಡ ಮತ್ತು ನಿರ್ದೇಶಕರಾಗಿ ಎನ್. ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ.ಜಯಂತ ಗೌಡ ಗುರಿಪಳ್ಳ, ಸುಂದರ ಗೌಡ ಪುಡ್ಕೆತ್ತು, ಬಿ.ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ್ ಗೌಡ ಎ ಅಡ್ಕಡಿ, ಜಯಂತ ಗೌಡ ಓಣಿಯಾಲು, ಭರತ್ ಗೌಡ ಹಾನಿಬೆಟ್ಟು, ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯಕುಮಾರ್ ಗೌಡ ಕಲ್ಲಲಿಕೆ, ಚೇತನಾ ಚಂದ್ರಶೇಖರ್ ಗೌಡ ಶಿಶಿಲ, ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ. ಎಸ್ ಲೆಕ್ಕಪರಿಶೋಧನ ಇಲಾಖೆ ಮಂಗಳೂರು ಇವರು ನೆರವೇರಿಸಿಕೊಟ್ಟರು.ಸಹಕಾರಿಯ ಮುಖ್ಯಕಾರ್ಯನಿರ್ವಾಹಣಾದಿಕಾರಿ ದಿನೇಶ್ ಕುಮಾರ್ ಕಲ್ಲಾಜೆ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here