


ಮಾಲಾಡಿ: ಮಾಲಾಡಿ ಗ್ರಾಮ ವ್ಯಾಪ್ತಿಯ ಸೊಂಣಂದೂರಿನ ನಡ್ಜೆ ಯಲ್ಲಿ ಸರಕಾರ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಗಳಿಗೆ ಕಿಂಡಿ ಇಳಿಸುವ ಕಾರ್ಯಕ್ರಮ ಊರವರ ಸಹಯೋಗದಲ್ಲಿ ಮತ್ತು ರೋಟರಿ ಕ್ಲಬ್ ಮಡಂತ್ಯಾರ್ ನೇತೃತ್ವದಲ್ಲಿ ನಡೆಸಲಾಯಿತು.
ನಿವೃತ್ತ ಪ್ರಾಂಶುಪಾಲರಾದ ರೋ.ಜೋಸೆಫ್ ಎನ್.ಎಮ್ ಇವರ ಮಾರ್ಗದರ್ಶನ ದಲ್ಲಿ ನಡೆಸಲಾದ ಸದ್ರಿ ಯೋಜನೆ ಯಿಂದ ಸುಮಾರು 400 ಬೋರೆವೆಲ್ ಗಳ ಬತ್ತುವಿಕೆ ತಡೆಯಬಹುದಾಗಿದೆ.



ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರು ಟಿ. ವಿ. ಶ್ರೀಧರ ರಾವ್, ಕಾರ್ಯದರ್ಶಿ ರೋ.ನಿತ್ಯಾನಂದ ಬಿ., ವಿಲ್ಫ್ರೇಡ್ ಪ್ರವೀಣ್ ಡಿಸೋಜ, ಫೇಲಿಕ್ಸ್ ಮಸ್ಕರೇನಸ್, ಮೈಕಲ್ ಡಿಸೋಜ, ವಿಲ್ಫ್ರೇಡ್ ಗೊನ್ಸಾಲ್ವಿಸ್, ಸುರೇಶ್ ಮೂಲ್ಯ, ಅನಿಲ್ ರೋಡ್ರಿಗಸ್, ಸುನಿಲ್ ಮೋರಸ್, ಉಮೇಶ್ ಪೂಜಾರಿ ಇವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಹಕರಿಸಿದ ಕೃಷಿಕ ಬಂಧು ಸ್ವಯಂಸೇವಕರನ್ನು ಗೌರವಿಸಲಾಯಿತು.


 
            





