ಪುತ್ತೂರು: ಕಳೆದ ಎರಡೂವರೆ ವರುಷದಲ್ಲಿ 116ಕ್ಕೂ ಮಿಕ್ಕಿ ಅಭ್ಯರ್ಥಿಗಳು ವಿವಿಧ ಸರಕಾರಿ ನೇಮಕಾತಿಗಳಲ್ಲಿ ಆಯ್ಕೆಯಾಗುವಂತೆ ಶ್ರಮ ಪಟ್ಟಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ , ಪ್ರಾಥಮಿಕ ಹಂತದಿಂದ ದೇಶದ ಅತ್ಯುನ್ನತ ಹುದ್ದೆಗಳ ವರೆಗಿನ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ನುರಿತ ಭೋದನಾ ತಂಡದಿಂದ ನೂತನ ಸಾಲಿಗೆ ಪ್ರವೇಶಾತಿಯೂ ಡಿ.11 ರಿಂದ ಆರಂಭಗೊಂಡಿದೆ.
ಐಎಎಸ್ , ಕೆಎಎಸ್ , ಎಫ್ ಡಿ ಎ ಅಥವಾ ಎಸ್ಡಿಎ , ಪಿಎಸ್ ಐ ಅಥವಾ ಪಿ ಸಿ , ಪಿಡಿಓ ಅಥವಾ ವಿಎ , ಬ್ಯಾಂಕಿಂಗ್ ,ಎಸ್ ಎಸ್ ಸಿ , ,ಅರಣ್ಯ, ರೈಲ್ವೆ, ಅಗ್ನಿಪಥ್ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ನೇಮಕಾತಿಗೆ ತರಬೇತಿ ಜೊತೆಗೆ GPSTR /HSTR/TET/CTET/KSET/NET ತರಬೇತಿಗಳೂ ಆರಂಭಗೊಂಡಿದೆ.
ತರಬೇತಿಯೂ ಪ್ರತಿ ದಿನ ನೇರ ತರಗತಿಗಳ ಮೂಲಕ 9.30 ರಿಂದ 1.30 ತನಕ ಇದ್ದು, ಉದ್ಯೋಗಸ್ಥರು, ವಿದ್ಯಾರ್ಥಿಗಳಿಗೆ ಹಾಗೂ ಗೃಹಿಣಿಯರಿಗೆ ನಿತ್ಯ ರಾತ್ರಿ 8 ರಿಂದ 9 ರ ತನಕ ತರಬೇತಿಯಿದೆ.
ತರಬೇತಿ ವೇಳೆ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರ ಉಚಿತ ಸ್ಪೋಕನ್ ಇಂಗ್ಲಿಷ್, ಉಚಿತ ಕಂಪ್ಯೂಟರ್ ತರಬೇತಿ, ಉಚಿತ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ, ಪೊಲೀಸ್ , ಸೇನೆ ಗೆ ಸೇರ ಬಯಸುವವರಿಗೆ ಉಚಿತ ದೈಹಿಕ ಸದೃಢತೆಯ ಮೈದಾನ ತರಬೇತಿಯನ್ನು ಅಕಾಡೆಮಿ ವತಿಯಿಂದ ನೀಡಲಾಗುತ್ತದೆ.
ಬ್ಯಾಂಕಿಂಗ್ , ಕೋ- ಆಪರೇಟಿವ್ ಬ್ಯಾಂಕಿಂಗ್ ಹುದ್ದೆಯ ಪರೀಕ್ಷೆ ತರಬೇತಿ ಪಡೆಯೋರಿಗೆ ಪ್ರಾಕ್ಟಿಕಲ್ ಅಕೌಂಟಿಂಗ್ ಕೋರ್ಸ್ ಗಳನ್ನು ಜೊತೆಗೆ ಬೋಧನೆ ಮಾಡಲಾಗುತ್ತದೆ.ಇಷ್ಟು ಮಾತ್ರವಲ್ಲದೇ ವಿವಿಧ ಕಾರ್ಯಗಾರಗಳ ಮೂಲಕ ಉದ್ಯೋಗ ಕೌಶಲ್ಯತೆಗಳನ್ನು ಕಳಿಸಲು ಒತ್ತು ಕೊಡಲಾಗುತ್ತದೆ.
ಕಳೆದ ಎರಡೂವರೆ ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕರಾವಳಿ ಭಾಗದಲ್ಲಿ ಜಾಗೃತಿ ಮೂಡಿಸುತ್ತ ವಿದ್ಯಾಮಾತಾ ಮಹತ್ತರ ಪಾತ್ರವನ್ನು ವಹಿಸಿದ್ದು, ಭಾರತೀಯ ಸೇನೆ ,ಪೊಲೀಸ್, ಅರಣ್ಯ ,ಶಿಕ್ಷಣ , ಸಹಕಾರಿ ಇತ್ಯಾದಿ ವಿವಿಧ ಇಲಾಖೆ ನೇಮಕಾತಿಗಳಲ್ಲಿ 116 ಮಿಕ್ಕಿದ ಅಭ್ಯರ್ಥಿಗಳು ಆಯ್ಕೆ ಆಗಿರುವುದು ವಿದ್ಯಾಮಾತಾ ಅಕಾಡೆಮಿ ಅತ್ಯುತ್ತಮ ತರಬೇತಿಗೆ ಹಿಡಿದ ಕೈಗನ್ನಡಿ.
ಈ ನಿಟ್ಟಿನಲ್ಲಿ 2024ರ ಸಾಲಿನಲ್ಲೂ ಕೇಂದ್ರ, ರಾಜ್ಯ ಸರ್ಕಾರ , ಸರ್ಕಾರಿ ಸ್ವಾಮ್ಯ ವಿವಿಧ ಇಲಾಖೆಗಳ ನೇಮಕಾತಿಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ವಿದ್ಯಾಮಾತಾ ಅಕಾಡೆಮಿಯು ಶ್ರಮಿಸುತ್ತಿದ್ದು , ಆಸಕ್ತರು ಅಕಾಡೆಮಿಯ ಕಛೇರಿ ಆಥವಾ ದೂರವಾಣಿ 9620468869 (ಪುತ್ತೂರು), 9448527606( ಸುಳ್ಯ) ಸಂಪರ್ಕಿಸುವಂತೆ ಅಧ್ಯಕ್ಷ ಭಾಗ್ಯೇಶ್ ರೈ ತಿಳಿಸಿದ್ದಾರೆ.
6000 ಸಾವಿರ ವಿದ್ಯಾರ್ಥಿ ವೇತನ: ಬಿ.ಪಿ.ಎಲ್, ಅಂತ್ಯೋದಯ ರೇಶನ್ ಕಾರ್ಡ್ ಹೊಂದಿರುವ ಮಧ್ಯಮ ಅಥವಾ ಬಡ ಹಿನ್ನಲೆಯ ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 6,000 ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೀಡಿ ತರಬೇತಿಯನ್ನು ಕೊಡುವುದರ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೂ ವಿಶೇಷವಾದ ಪ್ರೋತ್ಸಾಹವನ್ನು ವಿದ್ಯಾಮಾತಾ ಅಕಾಡೆಮಿ ಒದಗಿಸಿಕೊಟ್ಟಿದೆ.