ಶಿರ್ಲಾಲು: ಶಿರ್ಲಾಲು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಶಿರ್ಲಾಲು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಕಿಸಾನ್ ಸಮ್ಮಾನ್, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(ಪಿಎಂಎಫ್‌ಬಿವೈ) ಉಜ್ವಲ್ ಗ್ಯಾಸ್ ಯೋಜನೆ ಪಿಂಚಣಿ ಅರೋಗ್ಯ ವಿಮೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಮಾಹಿತಿಯನ್ನು ಕೆನರಾ ಬ್ಯಾಂಕ್ ನೋಡೆಲ್ ಅಧಿಕಾರಿ ಉಷಾ ನಾಯಕ್ ಇವರು ವಿಸ್ತಾರವಾಗಿ ವಿವರಿಸಿದರು.
ಕೃಷಿ ಇಲಾಖೆ ಅಧಿಕಾರಿ ಅಭಿಲಾಷ್ ಕೇಂದ್ರ ಸರಕಾರದಿಂದ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಪ್ರಗತಿಪರ ಕೃಷಿಕರನ್ನು ಗ್ರಾಮದಲ್ಲಿ ಸ್ವಚ್ಛತಾ ಕೆಲಸ ಕಾರ್ಯ ಮಾಡುವ ಸ್ವಯಂಸೇವಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕೆನರಾ ಬ್ಯಾಂಕ್ ಶಿರ್ಲಾಲು ಮ್ಯಾನೇಜರ್, ಫಲ್ಗುಣಿ ಮತ್ತು ಸಿಬ್ಬಂದಿ ವರ್ಗ ಗ್ರಾಮ ಪಂ.ಅಧ್ಯಕ್ಷರು ಉಷಾ ಎಂ ಶೆಟ್ಟಿ, ಉಪಾಧ್ಯಕ್ಷ ಸೋಮನಾಥ, ಬಳ್ಳಿದಡ್ಡ ಶಿರ್ಲಾಲು ಸಹಕಾರ ಸಂಘದ ಅಧ್ಯಕ್ಷ ನವೀನ್ ಸಾಮಾನಿ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪುರಂದರ ಶಿರ್ಲಾಲು ಸ್ವಾಗತಿಸಿ, ಉಮೇಶ್ ಶೆಟ್ಟಿ ದಗಡೆ ಕೊಡಿ, ಮಾಧವ ಶಿರ್ಲಾಲು ನಿರೂಪಿಸಿದರು.