ಡಿ.17: ವೇಣೂರು ಮಹಾಮಸ್ತಕಾಭಿಷೇಕದ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ

0

ವೇಣೂರು: ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಜನಮಂಗಲ ಕಾರ್ಯಕ್ರಮದ ಅಂಗವಾಗಿ ಉಚಿತ ಬೃಹತ್ ವೈದ್ಯಕೀಯ ಶಿಬಿರ ಡಿ.17ರಂದು ವೇಣೂರಿನ ಭರತೇಶ ಸಮುದಾಯ ಸಭಾಭವನದಲ್ಲಿ ಜರಗಲಿದೆ ಎಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಹೇಳಿದರು.

ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮ ಪ್ರಸಾದ್ ಅಜಿಲ ವಹಿಸಲಿದ್ದಾರೆ.ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮಾಜಿ ಸಚಿವ ಅಭಯಚಂದ್ರ ಜೈನ್, ವೇಣೂರು ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗಡೆ ಬಿ.ಇ. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯ ವತಿಯಿಂದ ಉಚಿತ ಇಸಿಜಿ ಡಾ.ದೀಪಕ್ ಮಡಿ ಇವರ ನೇತೃತ್ವದಲ್ಲಿ ಸಾಮಾನ್ಯ ಆರೋಗ್ಯ, ಕಣ್ಣಿನ ತಪಾಸಣೆ, ಡಾ.ಆತ್ಮನಂದ ಹೆಗ್ಡೆ ನೇತೃತ್ವದಲ್ಲಿ ಎಲುಬು, ಮೂಳೆ ರೋಗ, ಡಾ.ಶೌರ್ಯ ಬ್ಯಾನರ್ಜಿ ಇವರ ನೇತೃತ್ವದಲ್ಲಿ ಸ್ತನ ರೋಗ ತಪಾಸಣೆ ಮಾಹಿತಿ, ದೇರಳಕಟ್ಟೆ ಎ.ಬಿ ಶೆಟ್ಟಿ ಸ್ಮಾರಕ ದಂತ ಆಸ್ಪತ್ರೆಯ ಡಾ.ಅಡ್ರಿ ಮೇಡೊನಾ ಡಿ ಕೊಸ್ತಾರ ನೇತೃತ್ವದಲ್ಲಿ ದಂತ ಚಿಕಿತ್ಸೆ, ಕೋಟೆಕಲ್ ಆರ್ಯ ವೈದ್ಯ ಶಾಲಾ ಡಾ.ಶಂಕರನ್ ನಂಬೋದರಿ ನೇತೃತ್ವದಲ್ಲಿ ಆಯುರ್ವೇದ ಚಿಕಿತ್ಸೆ, ಮೂಡಬಿದ್ರೆ ಆಳ್ವಸ್ ರೋಟರಿ ಬ್ಲಡ್ ಸೆಂಟರ್ ನಿಂದ ರಕ್ತದಾನ ರಕ್ತಪರೀಕ್ಷೆ ಇತ್ಯಾದಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಶಿವ ಪ್ರಸಾದ್ ಅಜಿಲ, ಸಹ ಸಂಚಾಲಕರಾದ ಡಾ.ಶಾಂತಿ ಪ್ರಸಾದ್, ಡಾ.ಜಗದೀಶ್ ಪ್ರಸಾದ್, ಕೋಶಾಧಿಕಾರಿ ಜಯರಾಜ್ ಕಂಬಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here