ಡಿ.21: ಬೆಳ್ತಂಗಡಿಯ ಹಳೆಯ ತಾಲೂಕು ಕಛೇರಿ ಕಟ್ಟಡದ ತೆರವಿನ ಸಂದರ್ಭದಲ್ಲಿ ಲಭ್ಯವಾದ ಮರು ಉಪಯೋಗಕ್ಕೆ ಸಾಧ್ಯವಾಗುವ ಸಾಮಾಗ್ರಿಗಳ ಹರಾಜು ಪ್ರಕ್ರಿಯೆ

0

ಬೆಳ್ತಂಗಡಿ: ಕ.ರಾ.ರ.ಸಾ.ಸಂಸ್ಥೆ, ಬೆಳ್ತಂಗಡಿ ಬಸ್ಸು ನಿಲ್ದಾಣ ನಿರ್ಮಾಣಕ್ಕಾಗಿ ಮಂಜೂರಾದ ನಿವೇಶನದಲ್ಲಿದ್ದ ಕಂದಾಯ ಇಲಾಖೆ ಬೆಳ್ತಂಗಡಿಯ ಹಳೆಯ ತಾಲೂಕು ಕಛೇರಿ ಕಟ್ಟಡದ ತೆರವಿನ ಸಂದರ್ಭದಲ್ಲಿ ಲಭ್ಯವಾದಂತಹ ಮರು ಉಪಯೋಗ/ಪುನರ್ ಬಳಕೆ ಸಾಧ್ಯವಾಗುವ ಸಾಮಾಗ್ರಿಗಳಾದ ಕಟ್ಟಡ ಕಲ್ಲು, ಕಿಟಕಿ ಬಾಗಿಲು (ಕಬ್ಬಿಣ/ಮರ) ಛಾವಣಿ ನಿರ್ಮಾಣದ ಮರ/ಕಬ್ಬಿಣ (ಏಂಗಲ್ಸ್), ಹೆಂಚು, ಫಲಕಗಳು(ಸಿಮೆಂಟ್/ಕಬ್ಬಿಣ) ಇತ್ಯಾದಿ ಸಾಮಾಗ್ರಿಗಳನ್ನು ಕಟ್ಟಡದಿಂದ ಬಿಡಿಸಿ ನಿವೇಶನದಲ್ಲಿ ಹಾಗೂ ಕಂದಾಯ ಇಲಾಖೆಯ ನೂತನ ಆಡಳಿತ ಕಟ್ಟಡ (ಮಿನಿ ವಿದಾನ ಸೌಧ)ದ ಮುಂಭಾಗದಲ್ಲಿ ಗುಡ್ಡೆ ರೂಪದಲ್ಲಿ ಶೇಖರಣೆ ಮಾಡಲಾಗಿದೆ.ಸದರಿ ಸಾಮಾಗ್ರಿಗಳನ್ನು ಹರಾಜು ಮೂಲಕ ವಿಲೇವಾರಿ ಮಾಡುವುದಕ್ಕಾಗಿ ಹರಾಜು ಪ್ರಕ್ರಿಯೆಯನ್ನು ಸ್ಥಳದಲ್ಲಿಯೇ ಯಥಾಸ್ಥಿತಿಯಲ್ಲಿ ದಿನಾಂಕ: 21/12/2023 ರಂದು ಪೂರ್ವಾಹ್ನ 11.00 ಗಂಟೆಗೆ ನಡೆಸಲಾಗುವುದು.

ಹರಾಜಿನ ನಿಯಮಗಳು:

  1. ಆಸಕ್ತಿಯುಳ್ಳ ಬಿಡ್ಡುಗಾರರು ಮುಂಗಡ ಹಣಿ ರೂ. 10000/- ನ್ನು ಸ್ಥಳದಲ್ಲಿಯೇ ಪಾವತಿಸಿ ಹರಾಜಿನಲ್ಲಿ ಭಾಗವಹಿಸುವುದು.
  2. ಗರಿಷ್ಟ ಮೊತ್ತದ ಬಿಡ್ಡುಗಾರರು ಸ್ಥಳದಲ್ಲಿಯೇ ಬಿಡ್ಡಿನ ಮೊತ್ತ ಹಾಗೂ ಬಿಡ್ಡಿನ ಮೊತ್ತದ ಶೇ.18 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಮತ್ತು ಶೇ.1 ರಷ್ಟು ಆದಾಯ ತೆರಿಗೆಯನ್ನು ಸ್ಥಳದಲ್ಲಿಯೇ ಪಾವತಿಸತಕ್ಕದ್ದು, ತಪ್ಪಿದಲ್ಲಿ ಮುಂಗಡ ಹಣ 10000/- ನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
  3. ವಿಜೇತ ಬಿಡ್ಡುಗಾರರು ಸಾಮಾಗ್ರಿ ತೆರವಿನ ಸಂದರ್ಭದಲ್ಲಿ ಯಾವುದೇ ಸಂಸ್ಥೆಯ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿ ಮಾಡಬಾರದು. ಹಾನಿಯಾದರೆ ಬಿಡ್ಡುದಾರರೇ ಜವಾಬ್ದಾರರು.
  4. ಮೇಲ್ಕಂಡ ಸಾಮಾಗ್ರಿಗಳನ್ನು ತೆಗೆಯುವಾಗ/ಸಾಗಿಸುವಾಗ ಕೆಲಸಗಾರರಿಗೆ ಯಾವುದೇ ಅನಾಹುತವಾದರೇ ಸಂಸ್ಥೆಯು ಜವಾಬ್ದಾರಿಯಲ್ಲ, ಬಿಡ್ಡುದಾರರೇ ಜವಾಬ್ದಾರರು.
  5. ವಿಜೇತ ಬಿಡ್ಡುದಾರರು ನಿಗಮದ/ಸಾರ್ವಜನಿಕ ಆಸ್ತಿ ಅಥವಾ ಯಾವುದೇ ಸ್ವತ್ತುಗಳಿಗೆ ಹಾನಿಯಾಗದಂತೆ ಸಾಗಿಸುವುದು. ಹಾಗೂ ಮೇಲ್ಕಂಡ ಸಾಮಾಗ್ರಿಗಳನ್ನು ಸಾಗಿಸಿದ ನಂತರದಲ್ಲಿ ಉಳಿಯುವ ಎಲ್ಲಾ ಸಾಮಾಗ್ರಿಗಳ ತುಂಡು/ಚೂರು ಇತ್ಯಾದಿಗಳನ್ನು ಬಿಡ್ಡುದಾರರೇ ಹೊರ ಸಾಗಿಸತಕ್ಕದ್ದು. ನಂತರದಲ್ಲಿ ಮುಂಗಡ ಹಣ ರೂ.10000/-ನ್ನು ಹಿಂದಿರುಗಿಸಲಾಗುವುದು.
  6. ಯಾವುದೇ ಕಾರಣ ನೀಡದೇ ಹರಾಜನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ನಿಗಮದ ಸೂಕ್ತಾಧಿಕಾರಿಗಳು ಹೊಂದಿರುತ್ತಾರೆ.
  7. ವಿಜೇತ ಬಿಡ್ಡುದಾರರಿಗೆ ಸಾಮಾಗ್ರಿ ಸಾಗಿಸುವ ಕುರಿತಂತೆ ಸಂಸ್ಥೆಯಿಂದ ಅನುಮತಿ ನೀಡಿದ 10 ದಿನಗಳ ಒಳಗಾಗಿ ಸಾಮಾಗ್ರಿಗಳನ್ನು ಹೊರಸಾಗಿಸಬೇಕಿದ್ದು ವಿಳಂಭವಾದಲ್ಲಿ ಪ್ರತಿ ದಿನಕ್ಕೆ ರೂ 100 /- ನೆಲಬಾಡಿಗೆ ವಿಧಿಸಲಾಗುವುದು.
  8. ಈ ಕುರಿತಂತೆ ಮಾಹಿತಿ ವಿವರಗಳಿಗಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕ.ರಾ.ರ.ಸಾ ನಿಗಮ ಪುತ್ತೂರು ವಿಭಾಗ ದೂ. ಸಂಖ್ಯೆ 7760990984 ಗೆ ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here