ಉಜಿರೆ ಶ್ರೀ ಧ.ಮಂ.ಮಹಿಳಾ ಐಟಿಐ ಕಾಲೇಜಿನಲ್ಲಿ ಸಂಚಾರ ನಿಯಂತ್ರಣ, ರಸ್ತೆ ಸುರಕ್ಷತಾ ಮಾಹಿತಿ ಕಾರ್ಯಾಗಾರ

0

ಉಜಿರೆ: ಬೆಳ್ತಂಗಡಿ ತಾಲೂಕು ಸಂಚಾರಿ ಪೊಲೀಸ್ ಠಾಣೆ ಇಲ್ಲಿನ ಸಿಬ್ಬಂದಿಗಳು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಈ ಕೆಳಗಿನ ಮಾಹಿತಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಕಾಲೇಜು ಉಜಿರೆಯಲ್ಲಿ ನೀಡಿದರು.

ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆಯುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು, ವಾಹನ ಇನ್ಸೂರೆನ್ಸ್ ಗಳ ಮಹತ್ವ ಮತ್ತು ಅದನ್ನು ಮಾಡಿಸಬೇಕಾದ ಉದ್ದೇಶ, ಲರ್ನಿಂಗ್ ಲೈಸೆನ್ಸ್ ರಿಜಿಸ್ಟರ್ ಮಾಡಿಸುವುದರ ಬಗ್ಗೆ, DL ಮಾಡಿಸುವುದರ ಬಗ್ಗೆ, ಹೆಲ್ಮೆಟ್ ಧರಿಸುವುದರಿಂದ ಆಗುವ ಪ್ರಯೋಜನ ಮತ್ತು ಧರಿಸದೆ ಇದ್ದಲ್ಲಿ ಆಗುವ ದುಷ್ಪರಿಣಾಮ, ಮಿತಿ ಮೀರಿ ವಾಹನಗಳಲ್ಲಿ ಜನರನ್ನು ಕೂರಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಕೊನೆಯದಾಗಿ ವಿದ್ಯಾರ್ಥಿನಿಯರು ಸಂಚಾರಿ ನಿಯಂತ್ರಣ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಇದ್ದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಉತ್ತರ ಕಂಡುಕೊಂಡರು.ಸಂಧ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು‌.

p>

LEAVE A REPLY

Please enter your comment!
Please enter your name here