ಬೆಳ್ತಂಗಡಿ: ಶಿವಮಾಣಿಕ್ಯ ತಂಡದ ಇಪ್ಪತ್ತೊಂಬತ್ತನೆಯ ಯೋಜನೆಯ ಫಲಾನುಭವಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಂಬಾರು ಇಲ್ಲಿಯ 3ನೇ ತರಗತಿ ವಿದ್ಯಾರ್ಥಿ ರಕ್ಷಿತ್ ರಾಜ್ ಎಂಬವರಾಗಿದ್ದು, ಮೆದುಳು ಜ್ವರದಿಂದ ಬಳಲುತ್ತಿರುವ ಇವರು ತೀವ್ರ ನಿಗಾ ಘಟಕದಲ್ಲಿದ್ದು, ಸದ್ಯ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಅಗತ್ಯವಿರುವ ಕಾರಣ ತಂಡದಿಂದ ಸಂಗ್ರಹಿಸಲಾದ ಮೊತ್ತ 10,000 ರೂ.ಗಳನ್ನು ನ.30ರಂದು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು.
p>