ವಿಶ್ವ ವಿಕಲಚೇತನರ ದಿನ ಹಾಗೂ ಕಾನೂನು ಮಾಹಿತಿ ಶಿಬಿರ

0

ಲಾಯಿಲ: ಕಪುಚಿನ್‌ ಕೃಷಿಕ್‌ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನ ಆಚರಣೆ ಮತ್ತು ಕಾನೂನು ಮಾಹಿತಿ ಶಿಬಿರವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮಕ್ಕೆ ಉಧ್ಘಾಟಕರು ಆದ ಶ್ರೀ ವಿಜಯೇಂದ್ರ ಟಿ. ಹೆಚ್  ಹೆಚ್ಚುವರಿ ಸಿವಿಲ್‌ ನ್ಯಾಯಧೀಶರು, ಬೆಳ್ತಂಗಡಿ, ವಕೀಲರು ಹಾಗೂ ಸಂಸ್ಥೆಯ ಸಂಚಾಲಕರು ವಂದನೀಯ ಫಾದರ್‌ ವಿನೋದ್‌ ಮಸ್ಕರೇನ್ಹಸ್‌ ರವರು,  ಮುಖ್ಯ ಅತಿಥಿಗಳಾದ ವಸಂತ ಮರಕಡ ಅಧ್ಯಕ್ಷರು, ವಕೀಲರ ಸಂಘ ಬೆಳ್ತಂಗಡಿ, ನವೀನ್‌ ಬಿ. ಕೆ ಪ್ರಧಾನ ಕಾರ್ಯದರ್ಶಿಗಳು, ವಕೀಲರ ಸಂಘ, ಬೆಳ್ತಂಗಡಿ ಮತ್ತು ದಯಾ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯರವರು ವೆದಿಕೆಯನ್ನು ಹಂಚಿಕೊಂಡರು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಅಗಮಿಸಿದ ವಿಜಯೇಂದ್ರ ಟಿ. ಹೆಚ್ ಹೆಚ್ಚುವರಿ ಸಿವಿಲ್‌ ನ್ಯಾಯಧೀಶರು, ಬೆಳ್ತಂಗಡಿ ಇವರು ಮಾತನಾಡಿ ಎಲ್ಲಾರೂ ಘನತೆ-ಗೌರವದಿಂದ ಬದುಕು ಹಕ್ಕು ಎಲ್ಲಾರಿಗೂ ಇದೆ, ವಿಶೇಷ ಮಕ್ಕಳ ಸೇವೆ ಶ್ಲಾಘನೀಯ. ಧರ್ಮ ಎಂದರೆ ದಯಯೇ ಧರ್ಮ, ಒಂದು ಒಳ್ಳೆಯ ಪರಿಸರವನ್ನು ನಾವು ಉಂಟುಮಾಡಬೇಕು, ಎಲ್ಲಾರಿಗೂ ಸರಿಸಮಾನಾದ ಅವಕಾಶಗಳು ಸಿಗುವಂತಾಗಲಿ, ಇಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಗೌರವವನ್ನು ಸಲ್ಲಿಸುತ್ತೇನೆ, ವಿಶೇಷ ಮಕ್ಕಳಿಗೆ ಸಿಗುವ ಎಲ್ಲಾ ಸರಕಾರದ ಸೌಲಭ್ಯಗಳು ಸಿಗಲಿ, ಈ ಅದ್ಭುತವಾದ ಸೇವೆಗೆ ನ್ಯಾಯಲಯ ಮತ್ತು ವಕೀಲರ ಸಂಘ ಸಹಕಾರ ಮಾಡಲು ಸದಾ ಸಿದ್ದ, ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲಾ ಸಂಸ್ಥೆಯ ಸಿಬ್ಬಂಧಿ ವರ್ಗದವರಿಗೂ ಮತ್ತು ಮಕ್ಕಳ ಪೋಷಕರಿಗೂ ನಾನು ಗೌರವವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಶ್ರೀ ವಸಂತ ಮರಕಡ ಅಧ್ಯಕ್ಷರು, ವಕೀಲರ ಸಂಘ, ಬೆಳ್ತಂಗಡಿ ಮತನಾಡಿ ವಿಶೇಷ ಚೇತನರ ಸೇವೆ ಮಾಡುತ್ತುರುವ ಎಲ್ಲಾರಿಗೂ ಧನ್ಯವಾದವನ್ನು ಸಲ್ಲಿಸುತ್ತೇನೆ, ಈ ಪರಿಸ್ಥಿಯಲ್ಲಿ ಮಾತು ಕಡಿಮೆ ಯಾಕೆಂದರೆ ಮಾತು ಬರಲ್ಲ ಈ ಮಕ್ಕಳನ್ನು ಅರ್ಥೈಸಿ ಸೇವೆ ಮಾಡಿದರೆ ಅದೇ ಶ್ರೇಷ್ಠ ಕಾರ್ಯ.ದಿವ್ಯಾಂಗ ಮಕ್ಕಳ ಸೇವೆ ದೇವರ ಸೇವೆಯಾಗಿದೆ, ನ್ಯಾಯಾಲಯ ಮತ್ತು ವಕೀಲರ ಸಂಘವು ಸಹಾಯ ಮಾಡಲು ಸದಾ ಸಿದ್ದ ಎಂದರು.

ವಕೀಲರು ಹಾಗೂ ಸಂಸ್ಥೆಯ ಸಂಚಾಲಕರು ವಂದನೀಯ ಫಾದರ್‌ ವಿನೋದ್‌ ಮಸ್ಕರೇನ್ಹಸ್‌ ರವರು ಮಾತನಡಿ ವಿಶೇಷ ಚೇತನ ಮಕ್ಕಳಿಗೆ ಸರಕಾರದಿಂದ ಶೇಖಡ 3% ಮಿಸಲಾತಿ ಇದೆ, ಪ್ರತಿಯೊಬ್ಬರಿಗೂ ಘನತೆ-ಗೌರವದಿಂದ ಬದುಕು ಹಕ್ಕು ಇದೆ, ವಿಶೇಷ ಮಕ್ಕಳಿಗೆ ಎಲ್ಲಾ ಹಕ್ಕುಗಳು ಸಿಗುವಂತಾಗಲಿ, ಅವರಿಗೆ  ಗೌರವಯುತವಾದ, ಯೊಗ್ಯ ಮಗು ಸ್ನೇಹಿ ಪರಿಸರ, ಚಿಕಿತ್ಸೆ ಎಲ್ಲಾ ರೀತಿಯ ಸೌಲಭ್ಯಗಳು, ಸೌಕರ್ಯಗಳು ಒದಗಿಸುವಲ್ಲಿ ಸಂಸ್ಥೆಯು ಸದಾ ದುಡಿಯುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಸಂಧ್ಯ ಸಹ ಟೀಚರ್‌ ಸ್ವಾಗತಿಸಿದರು, ಧನ್ಯವಾದವನ್ನು ಚಿರಂಜಿವಿ ಸಹ ಶಿಕ್ಷಕಿ ರವರು ನೇರವೆರಿಸಿದರು.

p>

LEAVE A REPLY

Please enter your comment!
Please enter your name here