ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜು ಪ್ರಥಮ ದರ್ಜೆ ಕಾಲೇಜು ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ದಶಮಾನೋತ್ಸವ ಕಾರ್ಯಕ್ರಮವು ಡಿ.5ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಗುರುದೇವ ಕಾಲೇಜಿನ ಅಧ್ಯಕ್ಷ ಮಾಜಿ ಶಾಸಕ ಕೆ.ವಸಂತ ಬಂಗೇರ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜಯರಾಜ್ ಅಮೀನ್, ಕಾರ್ಯದರ್ಶಿ ಧರ್ಮ ವಿಜೇತ್, ಪಿತಂಬರ ಹೆರಾಜೆ, ಆದಮ್ ಸಹೇಬ್, ಉಪಾದ್ಯಕ್ಷ ಪದ್ಮನಾಭ, ಪ್ರಥಮ ದರ್ಜೆ ಕಾಲೇಜ್ ಅಧ್ಯಕ್ಷ ಚೇತನ್, ಕಾರ್ಯದರ್ಶಿ ಹಸ್ತಾವಿ, ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಮಿತ್ರೇಶ್, ಕಾರ್ಯದರ್ಶಿ ಶ್ರೀಲತ ಉಪಸ್ಥಿತಿ ಇದ್ದರು.
10ನೇ ವರ್ಷದ ಸ್ಮರಣಾ ಸಂಚಿಕೆ ಬಿಡುಗಡೆಗೊಳಿಸಿ, ಸಭೆಯಲ್ಲಿ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಮನುಜ ಪರಿಚಯಿಸಿದರು.2023-24ನೇ ಸಾಲಿನ ವರದಷದಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾಣ ವಿತರಣೆ ಮಾಡಲಾಯಿತು.
ಬಿ.ಎ ಶಮೀವುಲ್ಲಾ ವರದಿ ವಾಚಿಸಿ, ಕಾರ್ಯಕ್ರಮವನ್ನು ಪವಿತ್ರ ಮತ್ತು ಸೌಜನ್ಯ ನಿರೂಪಿಸಿ,ಗುರುದೇವ ಪ್ರ.ದ.ಕಾಲೇಜು ಪ್ರಾಂಶುಪಾಲೆ ಡಾ.ಸವಿತಾ ಸ್ವಾಗತಿಸಿ,ಪ.ಪೂ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ವಂದಿಸಿದರು.