ಡಿ.10: ಅಳದಂಗಡಿಯಲ್ಲಿ ಹಿಂದೂ ಹೃದಯ ಸಂಗಮ

0

ಬೆಳ್ತಂಗಡಿ: ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವೇಣೂರು ಪ್ರಖಂಡ ಹಾಗೂ ಹಿಂದೂ ಹೃದಯ ಸಂಗಮ ಸಮಿತಿ ಇದರ ಆಶ್ರಯದಲ್ಲಿ ಡಿ.10ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ ವಠಾರದಲ್ಲಿ ಹಿಂದೂ ಹೃದಯ ಸಂಗಮ ಜರಗಲಿದೆ ಎಂದು ವಿಶ್ವಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಭಾಸ್ಕರ.ಎಸ್ ರವರು ಡಿ.4ರಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವಹಿಂದೂ ಪರಿಷತ್ ಗೆ 60 ವರ್ಷದ ಸಂಭ್ರಮದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ವೇಣೂರು ಪ್ರಖಂಡದ 11 ಗ್ರಾಮಗಳಿಂದ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಏಕ ಜಾತಿಧರ್ಮ ದ್ವಾರಕ ಮಾಯಿ ಮಠ, ಶಂಕರಪುರ-ಉಡುಪಿಯ ಶ್ರೀ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡಲಿದ್ದಾರೆ.ವಿಶ್ವಹಿಂದೂ ಪರಿಷತ್, ಪುತ್ತೂರು ಜಿಲ್ಲಾ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮುಖ್ಯ ಭಾಷಣ ಮಾಡಲಿದ್ದಾರೆ.ಮುಖ್ಯ ಅತಿಥಿಯಾಗಿ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ ಇವರು ಭಾಗವಹಿಸಲಿದ್ದಾರೆ.ಸುಮಾರು 3 ಸಾವಿರ ಜನ ಸೇರುವ ನಿರೀಕ್ಷೆಯಲ್ಲಿದ್ದು, ಅಳದಂಗಡಿ ಆನೆಮಹಲ್ ನಿಂದ ದೇವಸ್ಥಾನದ ವರೆಗೆ ಶೋಭಾಯಾತ್ರೆ ನಡೆಯಲಿದೆ.ಸಭಾ ಕಾರ್ಯಕ್ರಮದ ಜೊತೆಗೆ ಕುಣಿತ ಭಜನೆಯನ್ನು ಸಂಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಹೃದಯ ಸಂಗಮ ಸಮಿತಿ ಅಧ್ಯಕ್ಷ ಜಯ ಸಾಲಿಯಾನ್, ಪ್ರ.ಕಾರ್ಯದರ್ಶಿ ಎಂ.ಪಿ.ಶೇಖರ ಶಿರ್ಲಾಲು, ಬಜರಂಗದಳ ವೇಣೂರು ಪ್ರಖಂಡದ ಗೌರವ ಸಲಹೆಗಾರರಾದ ಮೋಹನ್ ಅಂಡಿಂಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here