ಉಜಿರೆಯ ರುಡ್‌ಸೆಟ್‌ ಸಂಸ್ಥೆಯಲ್ಲಿ ನಡೆಯುವ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

0

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಎಸ್ ಡಿಎಮ್ಇ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ ಜೊತೆಯಾಗಿ ಸ್ಥಾಪಿಸಿರುವ ರುಡ್‌ಸೆಟ್‌ ಸಂಸ್ಥೆ ಇದೀಗ ದೇಶಾದ್ಯಂತ ಇರುವ ನಿರುದ್ಯೋಗ ಯುವಕ ಯುವತಿಯರಿಗೆ ಮತ್ತು ಉದ್ಯೋಗವನ್ನು ಅರಸುತ್ತಿರುವವರಿಗೆ, ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ವಿವಿಧ ಬ್ಯಾಂಕುಗಳಿಂದ ರುಡ್‌ಸೆಟ್‌ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿರುತ್ತದೆ.ಉಜಿರೆಯ ರುಡ್‌ಸೆಟ್‌ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ:

ಕೃತಕ ಆಭರಣಗಳ ತಯಾರಿಕೆ ಡಿ.18 ರಿಂದ ಡಿ.30ರವರೆಗೆ(13 ದಿನಗಳು), ಮೋಟಾರ್‌ ರಿವೈಂಡಿಂಗ್‌ ಜ.04ರಿಂದ ಫೆ.2 ರವರೆಗೆ (30 ದಿನಗಳು), ಜೇನು ಸಾಕಾಣಿಕೆ ಜ.08ರಿಂದ ಜ.17ರವರೆಗೆ(10 ದಿನಗಳು), ಎಸಿ ಮತ್ತು ಫ್ರಿಡ್ಜ್‌ ರಿಪೇರಿ ಜ.19ರಿಂದ ಫೆ.17ರವರೆಗೆ (30 ದಿನಗಳು), ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಫೆ.05ರಿಂದ ಫೆ.17ರವರೆಗೆ (13 ದಿನಗಳು)

ಈ ತರಬೇತಿಗಳು ನಡೆಯಲಿದೆ ಜೊತೆಗೆ ಮುಂದಿನ ದಿನಗಳಲ್ಲಿ ಕೃಷಿ ಉದ್ಯಮಿ, ಮೊಬೈಲ್‌ ಫೋನ್‌ ರಿಪೇರಿ, ಮೆನ್ಸ್‌ ಪಾರ್ಲರ್‌, ಮೋದಲಾದ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ರುಡ್‌ ಸೆಟ್‌ ಸಂಸ್ಥೆಯ email – [email protected] ಗೆ ಸಲ್ಲಿಸಬಹುದು, ವಾಟ್ಸಪ್‌ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್‌ ನಂ.6364561982 ಗೆ ಸಲ್ಲಿಸಬಹುದು. ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು – ನಿರ್ದೇಶಕರು ರುಡ್‌ಸೆಟ್‌ ಸಂಸ್ಥೆ, ಸಿದ್ದವನ ಉಜಿರೆ – 574240, ಇವರಿಗೆ ಕಳೂಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404, ಅಥವಾ 9591044014, 9902594791 ಗೆ ಸಂಪರ್ಕಿಸಬಹುದು. ಜೊತೆಗೆ https://forms.gle/Z2xPLE1FigamcMBd9 ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.

LEAVE A REPLY

Please enter your comment!
Please enter your name here