

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮಾರ್ಚ್ 20ರಿಂದ ಆರಂಭಗೊಳ್ಳಲಿದೆ.ಇದರ ಪೂರ್ವಭಾವಿಯಾಗಿ ಈಗಾಗಲೇ ಪೂರ್ಣಗೊಂಡ ದೇವಸ್ಥಾನದ ರಥಬೀದಿಯ ಕಾಂಕ್ರಿಟೀಕರಣದ ಉದ್ಘಾಟನೆ ಹಾಗೂ ದೇವಸ್ಥಾನದ ಮುಖ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದ ಜೊತೆಗೆ ಮನೆ ಮನೆಯಿಂದ ಅಡಕೆ ಸಂಗ್ರಹಣಾ ಕಾರ್ಯಕ್ರಮವು ಡಿ.16ನೇ ಶನಿವಾರ ಬೆಳಗ್ಗೆ 10ಗಂಟೆಗೆ ನಡೆಯಲಿರುವುದು.
ದೇವಸ್ಥಾನದ ಮುಖ ಮಂಟಪದ ಶಿಲಾನ್ಯಾಸ ಹಾಗೂ ರಥಬೀದಿಯ ಕಾಂಕ್ರಿಟೀಕರಣದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜಾ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ ಸಿಂಹ ನಾಯಕ್ ನೆರವೇರಿಸಲಿದ್ದಾರೆ.