ಸಂತ ತೆರೇಸಾ ಸಂಯುಕ್ತ ಪ.ಪೂ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವದ ಸಮಾರಂಭ

0

ಬೆಳ್ತಂಗಡಿ: ನ.28ರಂದು ಸಂತ ತೆರೇಸಾ ಸಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವವನ್ನು ಕಾಲೇಜಿನ ಮೈದಾನಾದಲ್ಲಿ ಹಮ್ಮಿಕೊಳ್ಳಲಾಯಿತು.ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಸಮಾರಂಭದ ಅಧ್ಯಕ್ಷರಾಗಿ ಸಿಸ್ಟರ್ ಜೂಲಿಯನ ಪಾಯ್ಸ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಅಭಿವೃದ್ಧಿಯ ಬಗ್ಗೆ ಮಾತನಾಡಿದರು ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ಹೂಗುಚ್ಛಗಳನ್ನು ನೀಡಿ ಅಭಿನಂದಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಕುಂಭಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಗಿರೀಶ್ ಕೆಎಚ್ ರವರು ಆಗಮಿಸಿದ್ದು, ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ನುಡಿದು ಸಂಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಂತ ತೆರೇಸಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಭಗಿನಿ ತೆರೇಸಿಯಾ ಸೆರಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಜೋಸೆಫ್ ಕೆ.ಜೆ. ಹಾಗೂ ಸಂತ ತೆರೇಸಾ ಕಾನ್ವೆಂಟಿನ ಸುಪೀರಿಯಾರ್ ಭಗಿನಿ ಜೆಸಿಂತಾ ಭಾರೆಟ್ಟೋ, ಸಂತ ತೆರೇಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಲೀನಾ ಡಿಸೋಜ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಹೆರಾಲ್ಡ್ ನೊರೋನಾ ಪ್ರಾಂಶುಪಾಲರಾದ ಭಗಿನಿ ಆರೋಗ್ಯ ಹಾಗೂ ಕಾಲೇಜಿನ ನಾಯಕಿ ಕುಮಾರಿ ತೇಜಾಕ್ಷಿ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲರು ಎಲ್ಲಾ ಅತಿಥಿಗಳಿಗೆ ಹೂಕುಂಡಗಳನ್ನು ನೀಡಿ ಸ್ವಾಗತಿಸಿದರು.ಎಲ್ಲಾ ಅತಿಥಿಗಳು ಸ್ಪರ್ಧೆಗಳಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಿದರು.ಭಗಿನಿ ರೇನಿಟಾ ರವರು ವಾರ್ಷಿಕ ವರದಿಯನ್ನು ಪಿಪಿಟಿಯ ಮುಖಾಂತರ ಮಂಡಿಸಿದರು.ಇದಕ್ಕೆ ಕಾಲೇಜಿನ ಉಪನ್ಯಾಸಕರಾದ ಕುಮಾರಿ ಪೂಜೆಶ್ರೀಯವರು ಸಹಕರಿಸಿದರು.ವಿದ್ಯಾರ್ಥಿಗಳು ಎಲ್ಲಾ ಉಪನ್ಯಾಸಕರ ಮುಂದಾಳುತನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮನೋರಂಜಿಸಿದರು.

ಉಪನ್ಯಾಸಕರಾದ ಝೀಟಾ ಹಾಗೂ ಪ್ರದೀಪ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಉಪನ್ಯಾಸಕರಾದ ಕುಮಾರಿ ನ್ಯಾನ್ಸಿ ಇವರು ಬಂದಿರುವಂತಹ ಎಲ್ಲರನ್ನು ವಂದಿಸಿದರು.ಕಾಲೇಜಿನ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಊರಿನ ಜನರು ಸಮಾರಂಭಕ್ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here